ದರ್ಶನ್  ಕೇಸ್: ಠಾಣೆ ಸುತ್ತಾ 144 ಸೆಕ್ಷನ್, ಶಾಮಿಯಾನ ಅಳವಡಿಕೆ | ಕಾರಣ ಏನು? - Mahanayaka
7:59 AM Wednesday 23 - October 2024

ದರ್ಶನ್  ಕೇಸ್: ಠಾಣೆ ಸುತ್ತಾ 144 ಸೆಕ್ಷನ್, ಶಾಮಿಯಾನ ಅಳವಡಿಕೆ | ಕಾರಣ ಏನು?

actor darshan
13/06/2024

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಎರಡನೇ ದಿನ ಪೊಲೀಸ್ ಕಸ್ಟಡಿಯಲ್ಲಿ ಕಳೆದಿದ್ದಾರೆ. ಆದರೆ ಈ ನಡುವೆ ಮಾಧ್ಯಮಗಳಿಗೆ ದರ್ಶನ್ ಸೇರಿ ಇತರೇ ಆರೋಪಿಗಳು ಕಾಣಿಸದಂತೆ ಪೊಲೀಸ್ ಠಾಣೆಯ ಸುತ್ತಲು ಶಾಮಿಯಾನ ಅಳಡಿಸಿದ್ದಾರೆ.

ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ಕಾಂಪೌಂಡ್ ಸುತ್ತಲು ಪೊಲೀಸರು ಪರದೆ ಕಟ್ಟಿಸಿದ್ದಾರೆ. ಹೊರಗಡೆಯಿಂದ ಯಾವುದೇ ಸಣ್ಣ ದೃಶ್ಯಾವಳಿಯೂ ಸಿಗದಂತೆ ಪೊಲೀಸರು ಶಾಮಿಯಾನ ಹಾಗೂ ಪರದೆ ಹಾಕಿಸಿದ್ದಾರೆ ಎನ್ನಲಾಗಿದೆ.

ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಬಳಿ 144 ಸೆಕ್ಷನ್ ಜಾರಿ ಮಾಡಿ ಪೊಲೀಸ್ ಕಮೀಷನರ್ ಬಿ. ದಯಾನಂದ ಅವರು ಆದೇಶ ಹೊರಡಿಸಿದ್ದಾರೆ. ಠಾಣೆ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಜೂನ್ 13 ರಿಂದ ಜೂನ್ 17 ವರೆಗೆ ಜಾರಿ ವರೆಗೂ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

ಕಾಮಾಕ್ಷಿಪಾಳ್ಯ ಠಾಣೆ ಕೇಸ್ 250/24 ಪ್ರಕರಣದ ವಿಚಾರಣೆ ನಡೆಯುತ್ತಿದೆ. ಪ್ರಕರಣದ ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆ ಸುತ್ತಮುತ್ತ ಸಾರ್ವಜನಿಕರು ಗುಂಪು ಸೇರುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಅದ್ದರಿಂದ ಅನ್ನಪೂರ್ಣೇಶ್ವರಿ ಠಾಣೆ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು, ದರ್ಶನ್ ಕೇಸ್ ಹೊರಗೆ ಬಂದ ತಕ್ಷಣ, ಹೊರಗೆ ತಂದು ಹಿಂದೆ ಯಾರೆಲ್ಲಾ ಇದ್ದಾರೆ ಅವರ ಬಂಧನ ಮಾಡಲಾಗಿದೆ. ಕುಟುಂಬಕ್ಕೆ ನ್ಯಾಯ ಕೊಡುವ ಕೆಲಸ ಮಾಡಿದ್ದಾರೆ ಸಂತೋಷ. ಆದರೆ ಸ್ಟೇಷನ್ ಬಳಿ‌ 144 ಹಾಕೋದು, ಶಾಮಿಯಾನ ಹಾಕೋದು, ಮಾಧ್ಯಮದವರಿಗೆ ನಿರ್ಬಂಧ ಹೇರೋದು ಸರಿಯಲ್ಲ. ಏನಾದ್ರು ತೊಂದರೆ ಆದರೆ ದೂರು ಕೊಡೋಕೆ ಅಲ್ಲಿಗೆ ಹೋಗಬೇಕು. ಇದರಲ್ಲಿ ಸತ್ಯಾಸತ್ಯತೆ ಹೊರಗೆ ಬರಬೇಕು. ಮುಚ್ಚಿಡೋ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ