ಜೈಲು ಸೇರಿದ ದರ್ಶನ್:  ಅಭಿಮಾನಿಯ ಚಿತ್ರ ಬಿಡುಗಡೆ ಮುಂದೂಡಿಕೆ - Mahanayaka
6:52 PM Saturday 21 - December 2024

ಜೈಲು ಸೇರಿದ ದರ್ಶನ್:  ಅಭಿಮಾನಿಯ ಚಿತ್ರ ಬಿಡುಗಡೆ ಮುಂದೂಡಿಕೆ

adavi
29/06/2024

ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜಕುಮಾರ್  ಅಣ್ಣಾವ್ರು ಅವರನ್ನು ಹೊರತುಪಡಿಸಿದರೆ ಅತಿ ಹೆಚ್ಚು ಅಭಿಮಾನಿಗಳ ಬಳಗವನ್ನು ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರಕರಣವೊಂದರಲ್ಲಿ ಸಿಲುಕಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಹಿನ್ನಲೆಯಲ್ಲಿ ಜುಲೈ  ತಿಂಗಳ 19 ರಂದು ಬಿಡುಗಡೆ ಆಗಬೇಕಿದ್ದ ಬಹು ನಿರೀಕ್ಷಿತ ಅಡವಿ ಚಿತ್ರದ ಬಿಡುಗಡೆಯನ್ನು ತಾತ್ಕಾಲಿಕ ವಾಗಿ ಮುಂದೂಡಲಾಗಿದೆ  ಅವರ ಹುಟ್ಟುಹಬ್ಬ ಕೂಡ ಆಚರಿಸಿಕೊಳ್ಳುವುದಿಲ್ಲ ಎಂದು ನಿರ್ದೇಶಕ ನಿರ್ಮಾಪಕ ಟೈಗರ್ ನಾಗ್ ತಿಳಿಸಿದ್ದಾರೆ.

ಪರಭಾಷೆ ಗಳಲ್ಲಿ ನಟಿಸದೆ ಕೇವಲ ಕನ್ನಡ ಚಿತ್ರಗಳಲ್ಲಿ ನಟಿಸುತ್ತಾ ಪ್ರತಿಭೆ ಮತ್ತು ಸ್ವ ಪ್ರಯತ್ನದಿಂದ ಅಪಾರ ಅಭಿಮಾನಿಗಳನ್ನು ಹೊಂದಿರುವ, ಕನ್ನಡ ಚಿತ್ರಗಳಿಗೆ ಪ್ಯಾಮಿಲಿ ಆಡಿಯನ್ಸ್ ಗಳನ್ನೂ ಥಿಯೇಟರ್ ಗಳಿಗೆ ಸೆಳೆಯುವಲ್ಲಿ ಯಶಸ್ವಿಯಾಗಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ  ವಿಶಿಷ್ಟ ಗುರುತನ್ನು ಮೂಡಿಸುತ್ತಿದ್ದ ದರ್ಶನ್ ಅವರು, ಈಗ  ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದು ಆವರು ತಪ್ಪು ಮಾಡಿದ್ದರೆ ಖಂಡಿತಾ ಶಿಕ್ಷೆಯಾಗಲಿ ಯಾಕೆ ಅಂದ್ರೆ ನಮ್ಮ ದೇಶದ ಸಂವಿಧಾನದ ಮುಂದೆ ಯಾರು ದೊಡ್ಡವರಲ್ಲ, ಅವರು ತಪ್ಪು ಮಾಡದೆ ಇದ್ರೆ ಆರೋಪ ಮುಕ್ತರಾಗಿ ಆದಷ್ಟು ಬೇಗ ಹೊರಬರಲಿ ಎಂದು ಅವರು  ಚಿತ್ರತಂಡ ಆಶಿಸಿದೆ.

ಯಾರಿಗೂ ಗೊತ್ತಾಗದಂತೆ  ಎಷ್ಟು ಮಠಮಾನ್ಯಗಳಿಗೆ ಅನಾಥಾಶ್ರಮಗಳಿಗೆ ಕಷ್ಟದಲ್ಲಿರುವ ಲಕ್ಷಾಂತರ ಜನರಿಗೆ ಸಹಾಯ ಮಾಡಿದ ದರ್ಶನ್  ಅವರನ್ನು ಈ ಪರಿಸ್ಥಿತಿಯಲ್ಲಿ ನೋಡಲು ರಾಜ್ಯದ ಅಭಿಮಾನಿಗಳಿಗೆ ಅಸಾಧ್ಯವಾಗಿದೆ. ಅದರಲ್ಲಿ ನಾನು ಕೂಡ ಒಬ್ಬ, ನನಗೂ ಈ ಪ್ರಕರಣ ನಾವು ತಂದಿದೆ , ದರ್ಶನ್ ಅವರನ್ನು ರಾಜಕೀಯ ಪ್ರಚಾರಕ್ಕಾಗಿ ಸಿನಿಮಾ ಬಿಡುಗಡೆ ಪ್ರಚಾರಕ್ಕಾಗಿ ಖಾಸಗಿ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಪಡೆದು ಮಾಧ್ಯಮಗಳ ಮುಂದೆ ಪೊಳ್ಳು ಭರವಸೆ  ನೀಡಿದ ನಟರುಗಳು ಆಗಲಿ ರಾಜಕಾರಣಿಗಳಾಗಲಿ ಅವರ ಜೊತೆ ನಿಲ್ಲದೆ ಇರುವುದು ರಾಜ್ಯದ ಅಭಿಮಾನಿಗಳಿಗೆ ಮತ್ತು ನನಗೆ ನೋವು ತಂದಿದೆ, ಆದರೆ ನಾವ್ಯಾರು ಕಾನೂನು ಉಲ್ಲಂಘಿಸದೆ ನ್ಯಾಯಾಲಯದ ತೀರ್ಪು ಬರುವವರೆಗೂ ತೀರ್ಪಿಗೆ ಬದ್ಧರಾಗಿ ಸಮಾಧಾನವಾಗಿ ಇರೋಣ ಅಭಿಮಾನಿಗಳೆಲ್ಲರೂ ಸಹಕರಿಸಬೇಕು  ಎಂದು  ನಿರ್ದೇಶಕ ನಿರ್ಮಾಪಕ ಟೈಗರ್  ನಾಗ್  ಮನವಿ ಮಾಡಿಕೊಂಡರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ