ದರ್ಶನ್ ಅಭಿಮಾನಿಗಳು V/S ಬಲಪಂಥೀಯ ಸಂಘಟನೆಗಳು: ಕ್ರಾಂತಿ
ಅದೃಷ್ಟ ದೇವತೆಯನ್ನು ಬಟ್ಟೆ ಬಿಚ್ಚಿ ಬೆಡ್ ರೂಮ್ ನಲ್ಲಿ ಕೂರಿಸಬೇಕು ಎಂಬ ಡಿ ಬಾಸ್ ದರ್ಶನ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಬಲಪಂಥೀಯ ಸಂಘಟನೆಗಳು ನಟ ದರ್ಶನ್ ಅವರ ನೂತನ ಸಿನಿಮಾ ಕ್ರಾಂತಿ ಚಿತ್ರವನ್ನು ಬಹಿಷ್ಕಾರಿಸಲು ಕರೆ ನೀಡಿದೆ.
ಈಗಾಗಲೇ ಕೆಲವು ಮಾಧ್ಯಮಗಳು ಡಿಬಾಸ್ ದರ್ಶನ್ ಅವರಿಗೆ ಬಹಿಷ್ಕಾರ ಹಾಕಿದ್ದು, ಕ್ರಾಂತಿ ಸಿನಿಮಾಕ್ಕೆ ಯಾವುದೇ ಪ್ರಚಾರ ನೀಡಿಲ್ಲ. ಈ ನಡುವೆ ಯೂಟ್ಯೂಬ್ ಚಾನೆಲ್ ವೊಂದರಲ್ಲಿ ದರ್ಶನ್ ಆಡಿರುವ ಮಾತುಗಳಿಗೆ ಸಂಬಂಧಿಸಿದಂತೆ ವಿವಾದ ಸೃಷ್ಟಿಸಲಾಗಿದೆ.
ದರ್ಶನ್ ಅವರು ಹಿಂದೂ ದೇವತೆಗೆ ಅವಮಾನ ಮಾಡಿದ್ದಾರೆ ಎಂದು ಬಲಪಂಥೀಯ ಸಂಘಟನೆಗಳು ವಿವಾದ ಸೃಷ್ಟಿಸಿದ್ದರೆ, ಇತ್ತ ದರ್ಶನ್ ಅವರ ಅಭಿಮಾನಿಗಳು ದರ್ಶನ್ ಅವರ ಪರವಾಗಿ ನಿಂತಿದ್ದು, ಇದೊಂದು ವಿವಾದವೇ ಅಲ್ಲ, ಜನರ ಆಡು ಭಾಷೆಯಲ್ಲಿ ಬಳಕೆಯಲ್ಲಿರುವ ಮಾತನ್ನು ದರ್ಶನ್ ಅವರು ಹೇಳಿದ್ದಾರೆ ಅಷ್ಟೇ ಅವರು ಯಾರಿಗೂ ಅವಮಾನ ಮಾಡಿಲ್ಲ, ಇದೆಲ್ಲ ದರ್ಶನ್ ಅವರ ಮೇಲಿನ ಹಗೆತನವನ್ನು ಪ್ರದರ್ಶಿಸುತ್ತಿದೆ ಎಂದಿದ್ದಾರೆ.
ಶಾಸಕ ಜಮೀರ್ ಅವರ ಪುತ್ರನ ಬನಾರಸ್ ಚಿತ್ರವನ್ನು ಪ್ರಮೋಷನ್ ಮಾಡಿರೋದಕ್ಕೆ ದರ್ಶನ್ ಅವರನ್ನು ಬಲಪಂಥೀಯ ಸಂಘಟನೆಗಳು ಟಾರ್ಗೆಟ್ ಮಾಡ್ತಿವೆ. ಇದರಲ್ಲಿ ರಾಜಕೀಯ ದುರುದ್ದೇಶ ಇದೆ. ಹಾಗಾಗಿ ಇಂತಹದ್ದಕ್ಕೆಲ್ಲ ಅಭಿಮಾನಿಗಳು ತಲೆಕೆಡಿಸಿಕೊಳ್ಳಬೇಡಿ ಎಂದು ಕರೆ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka