ಜೈಲಿನಲ್ಲಿ ದರ್ಶನ್ ಗೆ ಜೈಲಿನಲ್ಲಿ ಆತ್ಮಗಳ ಅಟ್ಯಾಕ್!? | ಎಷ್ಟು ಸತ್ಯ?, ಎಷ್ಟು ಸುಳ್ಳು?
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ದರ್ಶನ್ ಆತ್ಮಗಳು ಕಾಟ ಕೊಡ್ತಿವೆ ಎಂಬ ವರದಿ ವ್ಯಾಪಕವಾಗಿ ಹರಡುತ್ತಿದೆ.
ವಾಸ್ತವವಾಗಿ ಈ ವರದಿ ಎಷ್ಟು ಸತ್ಯ ಎಷ್ಟು ಸುಳ್ಳು ಎನ್ನುವುದು ಗೊತ್ತಿಲ್ಲ. ಆದ್ರೆ ಜೈಲಿನಲ್ಲಿ ನಟ ದರ್ಶನ್ ಗೆ ಸರಿಯಾಗಿ ನಿದ್ದೆ ಇಲ್ಲ ಅಂತ ಹೇಳುತ್ತಿದ್ದಾರೆ. ಅಂದ ಹಾಗೆ, ಇತ್ತೀಚೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ದರ್ಶನ್ ಗೆ ಕಾಮಾಕ್ಯಮ್ಮ ತಾಯತ ತಟ್ಟಿದ್ದಾರೆ ಎಂಬ ಸುದ್ದಿ ಹರಿದಾಡಿದ ಬಳಿಕ ಇಂತಹದ್ದೊಂದು ವದಂತಿ ಕೇಳಿ ಬಂದಿದೆ.
ರಾಜ್ಯದ ಪ್ರಮುಖ ಮಾಧ್ಯಮಗಳ ಮಾಡಿರುವ ವರದಿಗಳ ಪ್ರಕಾರ, ನಟ ದರ್ಶನ್ ಇರುವ ಸೆಲ್, ಬ್ರಿಟಿಷರ ಕಾಲದಲ್ಲಿ ಇದು ಎರಡನೇ ಕಾಲಪಾನಿ ಜೈಲು ಅನ್ನೋ ಭಯಾನಕ ಚರಿತ್ರೆಯನ್ನು ಹೊಂದಿದೆಯಂತೆ! ಎಷ್ಟೋ ಮಂದಿ ಸ್ವಾತಂತ್ರ್ಯ ಹೋರಾಟಗಾರರನ್ನು ಇಲ್ಲಿ ಗಲ್ಲಿಗೇರಿಸಿದ ಇತಿಹಾಸವೂ ಇದೆ ಅಂತ ಹೇಳಲಾಗಿದೆ. ಇವತ್ತಿಗೂ ಈ ಜೈಲಿನೊಳಗೆ ವಿಷಕಾರಿ ಹಾವುಗಳು ಖೈದಿಗಳ ಮೈಮೇಲೆ ಹರಿದಾಡುತ್ತವೆ ಅನ್ನೋ ಆರೋಪಗಳೂ ಇವೆಯಂತೆ.
ಒಂಟಿಯಾಗಿ ಸೆರೆವಾಸ ಅನುಭವಿಸುತ್ತಿರುವ ಸೆಲ್ ನಿಂದ ರಾತ್ರಿ ಹೊತ್ತು ಚೀರಾಟದ, ಅರಚಾಟದ ಸದ್ದು ಕೇಳಿ ಬರುತ್ತಿದೆಯಂತೆ. ಖುದ್ದು ದರ್ಶನ್ ನಿದ್ದೆ ಮಾಡೋದಕ್ಕೆ ಒದ್ದಾಡುತ್ತಿದ್ದಾರೆ ಎಂದು ವರದಿಯಾಗಿದೆ.
ನಟ ದರ್ಶನ್ ತೀವ್ರ ಬೆನ್ನು ನೋವಿನಿಂದ ನರಳಾಡುತ್ತಿದ್ದಾರೆ, ಅವರಿಗೆ ನಿದ್ದೆಯಿಲ್ಲ ಎನ್ನುವ ಸುದ್ದಿ ಇತ್ತೀಚೆಗೆ ಕೇಳಿದ್ದೆವು, ಇದೀಗ ಆತ್ಮಗಳ ಅಟ್ಯಾಕ್ ಅನ್ನೋ ವದಂತಿಗಳು ಹರಿದಾಡುತ್ತಿದೆ. ರೇಣುಕಾಸ್ವಾಮಿಯ ಆತ್ಮ ದರ್ಶನ್ ಗೆ ಕಾಟ ಕೊಡುತ್ತಿದೆ ಎನ್ನುವ ವದಂತಿ ಇದೀಗ ಮಾಧ್ಯಮಗಳಿಂದಲೇ ಪ್ರಸಾರವಾಗುತ್ತಿದೆ.
ನಟ ದರ್ಶನ್ ಬಗ್ಗೆ ಹಲವು ರೀತಿಯ ವರದಿಗಳು ಈವರೆಗೆ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿದೆ. ಆದರೆ ಇದರಲ್ಲಿ ಎಷ್ಟು ವರದಿಗಳು ವಿಶ್ವಾಸಾರ್ಹ ಅನ್ನೋ ಪ್ರಶ್ನೆಗಳು ಮೂಡಿವೆ. ಕಾಲ್ಪಿತ ವರದಿಗಳಿಂದ ಮಾಧ್ಯಮ ಕ್ಷೇತ್ರಕ್ಕೆ ಹಾನಿಯಾಗುತ್ತಿದೆ ಎನ್ನುವ ಅಸಮಾಧಾನಗಳು ಕೂಡ ಕೇಳಿ ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: