ಡಿಬಾಸ್ ದರ್ಶನ್ ಅವರ ಮೌನ ಜಗ್ಗೇಶ್ ರನ್ನು ಕೊಲ್ಲುತ್ತಿದೆ | ಕೆಟ್ಟದಾಗಿ ಮಾತನಾಡಿ ಚಡಪಡಿಸುತ್ತಿರುವ ಜಗ್ಗೇಶ್ - Mahanayaka

ಡಿಬಾಸ್ ದರ್ಶನ್ ಅವರ ಮೌನ ಜಗ್ಗೇಶ್ ರನ್ನು ಕೊಲ್ಲುತ್ತಿದೆ | ಕೆಟ್ಟದಾಗಿ ಮಾತನಾಡಿ ಚಡಪಡಿಸುತ್ತಿರುವ ಜಗ್ಗೇಶ್

24/02/2021

ಸಿನಿಡೆಸ್ಕ್: ವಿವಾದಿತ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಜಗ್ಗೇಶ್ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ.  ಜಗ್ಗೇಶ್ ಹೇಳಿಕೆಗೆ ಸಂಬಂಧಿಸಿದಂತೆ ಜಗ್ಗೇಶ್ ಅವರ ತೋತಾಪುರಿ ಚಿತ್ರದ ಶೂಟಿಂಗ್ ವೇಳೆಯೇ ದರ್ಶನ್ ಅಭಿಮಾನಿಗಳು  ಮುತ್ತಿಗೆ ಹಾಕಿದ್ದಾರೆ. ಇಷ್ಟೆಲ್ಲ ಘಟನೆಗಳು ನಡೆದರೂ ನಟ ದರ್ಶನ್ ಯಾವುದೇ ರಿಪ್ಲೈ ಮಾಡಿಲ್ಲ.

ದರ್ಶನ್ ಬಗ್ಗೆ ಫೋನ್ ನಲ್ಲಿ ಕೆಟ್ಟದಾಗಿ ಮಾತನಾಡಿರುವ ಜಗ್ಗೇಶ್ ಅವರನ್ನು ದರ್ಶನ್ ಅವರ ಮೌನ ಕೊಲ್ಲುತ್ತಿದ್ದು, ದರ್ಶನ್ ಮೌನದ ಬಗ್ಗೆ ಜಗ್ಗೇಶ್ ಇಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಸಮಯದಲ್ಲಿ  ದರ್ಶನ್ ನನಗಾದರೂ ಕಾಲ್ ಮಾಡಿ ಮಾತನಾಡಬೇಕಿತ್ತು. ಅವರ ಮೌನದಿಂದ ನನಗೆ ತುಂಬಾ ನೋವಾಗಿದೆ. ನಮ್ಮ ಹಿರಿಯರ ದೌರ್ಭಾಗ್ಯವಿದೆ ಎಂದು ಅವರು ಹೇಳಿದ್ದಾರೆ.

ದರ್ಶನ್ ಪರ ತಾನು ಹಿಂದೆ  ಕನ್ನಡದ ರಜನಿ ಕಾಂತ್, ಕನ್ನಡದ ತೇರು ಎಂದೆಲ್ಲ ಹೇಳುವಾಗ ಎಲ್ಲರೂ ಖುಷಿಪಟ್ಟಿರಿ ಇಂದು ನಿಮಗೆ ಇದು ಕಾಣಿಸಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಪೋನ್ ನಲ್ಲಿ ದರ್ಶನ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ಜಗ್ಗೇಶ್ ಇದೀಗ ಇದಕ್ಕೆ ದರ್ಶನ್ ಉತ್ತರಿಸಬೇಕು ಎಂದು ಹೇಳುತ್ತಿದ್ದಾರೆ. ದರ್ಶನ್ ಇಲ್ಲಿಯವರೆಗೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ದರ್ಶನ್ ಅವರನ್ನು ಮಾತನಾಡಿಸಬೇಕು ಎಂದು ಜಗ್ಗೇಶ್ ಅವರು ನೀಡುತ್ತಿರುವ ಪ್ರತಿ ಹೇಳಿಕೆಯೂ ವೈಫಲ್ಯವಾಗುತ್ತಿದೆ. ಜೊತೆಗೆ ಜಗ್ಗೇಶ್ ಅವರು  ಆರೆಸ್ಸೆಸ್ ಹೆಸರು ಬಳಸಿ ದರ್ಶನ್ ಅವರನ್ನು ಹಿಮ್ಮೆಟ್ಟಿಸಲು ಕೂಡ ಪ್ರಯತ್ನಿಸಿದ್ದಾರೆ.ಜೊತೆಗೆ ಹಿರಿಯ ನಟರ ಹೆಸರನ್ನು ಬಳಸಿ ತನ್ನ ಇಮೇಜ್ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಇಷ್ಟಾದರೂ ದರ್ಶನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಪ್ರತಿಕ್ರಿಯೆ ನೀಡುವ ಅಗತ್ಯವೂ ಅವರಿಗೆ ಇಲ್ಲ ಎಂದು ಅನ್ನಿಸಿರಬಹುದು. ಕೆಟ್ಟದಾಗಿ ಹೇಳಿಕೆ ನೀಡಿರುವ ಜಗ್ಗೇಶ್ ಈಗ ದರ್ಶನ್ ಅವರ ಪ್ರತಿಕ್ರಿಯೆಗೆ ಕಾಯುವುದರಲ್ಲಿ ಯಾವ ನ್ಯಾಯ ಇದೆ ಎಂದು ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗಿದೆ.

ಇತ್ತೀಚಿನ ಸುದ್ದಿ