ದರ್ಶನ್ ಗೆಳತಿ ಪವಿತ್ರಾ ಗೌಡ ಅರೆಸ್ಟ್: ಹತ್ಯೆಗೀಡಾದವ ದರ್ಶನ್ ಅಭಿಮಾನಿ!? - Mahanayaka
10:35 PM Wednesday 5 - February 2025

ದರ್ಶನ್ ಗೆಳತಿ ಪವಿತ್ರಾ ಗೌಡ ಅರೆಸ್ಟ್: ಹತ್ಯೆಗೀಡಾದವ ದರ್ಶನ್ ಅಭಿಮಾನಿ!?

darshan
11/06/2024

ಬೆಂಗಳೂರು:  ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾದ ಬೆನ್ನಲ್ಲೇ ಇದೀಗ ನಟ ದರ್ಶನ್ ಗೆಳತಿ ಪವಿತ್ರಾ ಗೌಡಳನ್ನು ಆರ್​​.ಆರ್​.ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪವಿತ್ರಾ ಗೌಡಳನ್ನು ಸದ್ಯ ಕಾಮಾಕ್ಷಿ ಪಾಳ್ಯ ಸ್ಟೇಷನ್ ಗೆ ಪೊಲೀಸರು ಕರೆತಂದಿದ್ದಾರೆ.  ಇನ್ನೂ ಪವಿತ್ರಾ ಅವರ ಜೊತೆಗೆ ಆಕೆಯ ಅಕ್ಕಾ ಕೂಡ ಠಾಣೆಗೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ ಪಟ್ಟಣಗೆರೆ ಜಯಣ್ಣ ಪುತ್ರ ವಿನಯ್​, ಕಿರಣ್, ಮಧು, ಲಕ್ಷ್ಮಣ್​, ಆನಂದ್​​, ರಾಘವೇಂದ್ರ ಸೇರಿ 10 ಜನರನ್ನು ಅರೆಸ್ಟ್ ಮಾಡಲಾಗಿದೆ.

ಕೊಲೆಯಾದವ ದರ್ಶನ್ ಅಭಿಮಾನಿ?

ಹತ್ಯೆಗೀಡಾದ ರೇಣುಕಾಸ್ವಾಮಿ ದರ್ಶನ್ ಅವರ ಅಭಿಮಾನಿ ಎಂದು ಹೇಳಲಾಗಿದೆ. ದರ್ಶನ್ ಹಾಗೂ ವಿಜಯಲಕ್ಷ್ಮೀ ಸಂಸಾರದ ನಡುವೆ ಪವಿತ್ರಾ ಗೌಡ ಬರುತ್ತಿದ್ದಾಳೆಂದು ತಿಳಿದು ಮೆಸೇಜ್ ಮಾಡಿದ್ದ ಎನ್ನಲಾಗಿದೆ. ಪವಿತ್ರಾ ಗೌಡಗೆ ಮೆಸೇಜ್ ಮಾಡುತ್ತಿರುವುದು ತಿಳಿದ ಬಳಿಕ ಹತ್ಯೆ ನಡೆಸಲಾಗಿದೆ ಎಂದು ಹೇಳಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ