ದಾಸಪ್ಪ ಎಡಪದವು ನಿಧನಕ್ಕೆ ಜೊತೆಗಾರರ ಕಂಬನಿ | Video
ಮಂಗಳೂರು: ಬಹುಜನ ಸಮಾಜ ಪಾರ್ಟಿ(BSP)ಯ ಜಿಲ್ಲಾಧ್ಯಕ್ಷರಾದ ದಾಸಪ್ಪ ಎಡಪದವು ಅವರು ಇಂದು ನಿಧನರಾಗಿದ್ದಾರೆ. ದಾಸಪ್ಪ ಅವರ ನಿಧನದ ಸುದ್ದಿ ಕೇಳಿ ಅವರ ಅಭಿಮಾನಿಗಳು, ಚಳುವಳಿಯ ಜೊತೆಗಾರರಿಗೆ ಆಘಾತವಾಗಿದೆ.
ದಾಸಪ್ಪ ಎಡಪದವು ಅವರ ನಿಧನಕ್ಕೆ ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ರಜನಿ ಅವರು ಸಂತಾಪ ಸೂಚಿಸಿದ್ದಾರೆ. ದಾಸಪ್ಪ ಎಡಪದವು ಅವರು, ಬಹುಜನ ಚಳುವಳಿಗೆ ಹಗಲಿರುಳು ದುಡಿಯುತ್ತಿದ್ದರು. ತಮ್ಮ ಕೊನೆಯ ದಿನದವರೆಗೂ ಅವರು ಚಳುವಳಿಯ ಕೆಲಸದಲ್ಲಿ ಮಗ್ನರಾಗಿದ್ದರು. ದೇಶದ ಬಹುಜನ ನಾಯಕರ ವಿಚಾರಗಳನ್ನು ಮನೆ ಮನೆಗೆ ತಲುಪಿಸುವಲ್ಲಿ ದಾಸಪ್ಪ ಎಡಪದವು ಅವರು ನಿರಂತರವಾಗಿ ಕೆಲಸ ಮಾಡಿದ್ದಾರೆ. ಬಹುಜನ ಸಮಾಜಕ್ಕೆ ಅವರ ಸೇವೆ ಅಪಾರವಾದದ್ದು ಎಂದು ಅವರು ಮಹಾನಾಯಕ ಮಾಧ್ಯಮಕ್ಕೆ ತಿಳಿಸಿದರು.
ಇನ್ನೂ ದಾಸಪ್ಪ ಎಡಪದವು ಅವರ ನಿಧನದ ಹಿನ್ನೆಲೆಯಲ್ಲಿ ಮಹಾನಾಯಕ ಮಾಧ್ಯಮದ ಜೊತೆಗೆ ಭಾವುಕರಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವಿಡಿಯೋ ನೋಡಿ:
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka