ಕಾಡಾನೆಯ ಜೊತೆಗಿನ ಸೆಣಸಾಟದಲ್ಲಿ ಮೃತಪಟ್ಟ ದಸರಾ ಆನೆ ಗೋಪಾಲಸ್ವಾಮಿ
ಮೈಸೂರು: ಕಾಡಾನೆಯ ಜೊತೆಗೆ ನಡೆಸಿದ ಸೆಣಸಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಸರಾ ಆನೆ ಗೋಪಾಲಸ್ವಾಮಿ ಬುಧವಾರ ಮೃತಪಟ್ಟಿದೆ.
ನಾಗರಹೊಳೆ ಮತ್ತಿಗೋಡು ಆನೆ ಶಿಬಿರದಲ್ಲಿದ್ದ ಗೋಪಾಲಸ್ವಾಮಿ ಆನೆ ಮಂಗಳವಾರ ಕಾಡಿಗೆ ಮೇಯಲು ಹೋಗಿದ್ದಾಗ ಕಾಡಾನೆ ಜೊತೆಗೆ ಕಾದಾಡಿದ್ದು, ಈ ವೇಳೆ ಗಂಭೀರವಾಗಿ ಗಾಯಗೊಂಡಿತ್ತು.
ಗೋಪಾಲಸ್ವಾಮಿಗೆ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಗೋಪಾಲಸ್ವಾಮಿ ಮೃತಟ್ಟಿದೆ.
ಗೋಪಾಲಸ್ವಾಮಿ 14 ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗಿತ್ತು. ಅಲ್ಲದೇ, ಹುಲಿ, ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಸೇವೆ ಸಲ್ಲಿಸಿತ್ತು. ಗೋಪಾಲಸ್ವಾಮಿಯ ಸಾವಿಗೆ ನಾಡಿನ ಜನತೆ ಭಾವುಕರಾಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka