ಲಾಡ್ಜ್ ನಲ್ಲಿ ದಸರ ಪಾರ್ಟಿಯ ವೇಳೆ ಸ್ನೇಹಿತರ ನಡುವೆ ಗಲಾಟೆ: ಓರ್ವನ ಬರ್ಬರ ಹತ್ಯೆ
ಮಂಗಳೂರು: ದಸರ ಪಾರ್ಟಿಯ ವೇಳೆ ಯುವಕನ ಸ್ನೇಹಿತರ ನಡುವೆಯೇ ಗಲಾಟೆ ನಡೆದು ಓರ್ವ ಯುವಕನನ್ನು ಇರಿದು ಹತ್ಯೆ ಮಾಡಿರುವ ಘಟನೆ ಮಂಗಳೂರಿನ ಪಂಪ್ ವೆಲ್ ನ ಲಾಡ್ಜ್ ವೊಂದರಲ್ಲಿ ನಡೆದಿದ್ದು, ಪಾರ್ಟಿ ವೇಳೆ ಇಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೇಳಲಾಗಿದೆ.
20 ವರ್ಷ ವಯಸ್ಸಿನ ಧನುಷ್ ಹತ್ಯೆಯಾದ ಯುವಕ ಎಂದು ತಿಳಿದು ಬಂದಿದೆ. ಜೇಸನ್ ಸುರತ್ಕಲ್ ಎಂಬಾತ ಹರಿತವಾದ ಆಯುಧದಿಂದ ಇರಿದಿದ್ದು, ಈ ವೇಳೆ ಧನುಷ್ ನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ಇತರ ಸ್ನೇಹಿತರು ಯತ್ನಿಸಿದರಾದರೂ ಆತ ಮಾರ್ಗ ಮಧ್ಯ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಅಕ್ಟೋಬರ್ 15ರ ರಾತ್ರಿ ದಸರಾ ಹಬ್ಬದ ಪ್ರಯುಕ್ತ ಜತೆ ಸೇರಿದ್ದ ಸ್ನೇಹಿತರಾದ ಪ್ರಮೀತ್, ಜೇಸನ್, ಕಾರ್ತಿಕ್, ಧನುಷ್, ದುರ್ಗೇಶ್ ಪ್ರಜ್ವಲ್ ಲಾಡ್ಜ್ ವೊಂದರಲ್ಲಿ ಪಾರ್ಟಿ ಮಾಡಿದ್ದಾರೆ. 2 ಗಂಟೆ ರಾತ್ರಿ ವೇಳೆ ಜೇಸನ್ ಹಾಗೂ ಧನುಷ್ ಜೊತೆಗೆ ಜಗಳ ನಡೆದು ಜೇಸನ್ ಧನುಷ್ ಗೆ ಚುಚ್ಚಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ನಡೆದ ಲಾಡ್ಜ್ ನ ರೂಮ್ ನಲ್ಲಿ ಬಿಯರ್ ಬಾಟಲಿ, ಮದ್ಯದ ಪಾಕೆಟ್ ಗಳು ಕೂಡ ಕಂಡು ಬಂದಿವೆ. ಎಣ್ಣೆಯ ಮತ್ತಿನಲ್ಲಿ ಈ ಕೊಲೆ ನಡೆದಿದೆಯೇ ಎನ್ನುವ ಅನುಮಾನಗಳು ಕೂಡ ಇದೀಗ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ಅಮಾನವೀಯ ಘಟನೆ: ಎಂಡೋ ಸಲ್ಫಾನ್ ಪೀಡಿತ ಯುವಕನ ಮೇಲೆ ಅತ್ಯಾಚಾರ
ತ್ರಿಶೂಲ ದೀಕ್ಷೆ ನೀಡಿದ್ದೇವೆಯೇ ಹೊರತು ಬಾಂಬ್, ಗ್ರೆನೈಡ್ ಕೊಟ್ಟಿದ್ದಲ್ಲ | ಶರಣ್ ಪಂಪ್ ವೆಲ್
ಉಡುಪಿ: ‘ದುರ್ಗಾ ದೌಡ್’ ಮೆರವಣಿಗೆಯಲ್ಲಿ ಹಿಂದೂ ಜಾಗರಣ ಕಾರ್ಯಕರ್ತರಿಂದ ತಲವಾರು ಪ್ರದರ್ಶನ
ದಕ್ಷಿಣ ಕನ್ನಡ, ಉಡುಪಿ ಸಹಿತ 16 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ!
ದಸರಾ ಮೆರವಣಿಗೆಯ ಮೇಲೆ ಹರಿದ ಕಾರು: 20ಕ್ಕೂ ಅಧಿಕ ಮಂದಿ ನಜ್ಜುಗುಜ್ಜು
ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ: ಹೆಡ್ ಕಾನ್ಸ್ ಟೇಬಲ್ ಸಾವು
ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ಆರೋಪ: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಅರೆಸ್ಟ್