ಉಜಿರೆ: ದಾಸ್ತಾನು ಕೊಠಡಿಗೆ ಬೆಂಕಿ: ಅಪಾರ ನಷ್ಟ
ಉಜಿರೆ: ಕಲ್ಮಂಜ ಗ್ರಾಮದ ಗುತ್ತು ಮನೆ ಬಾಲಚಂದ್ರ ರಾವ್ ಎಂಬವರ ಮನೆಯ ದಾಸ್ತಾನು ಕೊಠಡಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ ಉಂಟಾದ ಘಟನೆ ಸೋಮವಾರ ನಡೆದಿದೆ.
ರಬ್ಬರ್ ಸ್ಮೋಕ್ ಹೌಸ್ ಕಡೆಯಿಂದ ದಾಸ್ತಾನು ಕೊಠಡಿಗೆ ಬೆಂಕಿ ಆವರಿಸಿದ್ದು 7,000 ಕ್ಕಿಂತ ಅಧಿಕ ತೆಂಗಿನ ಕಾಯಿ 2 ಕ್ವಿಂಟಾಲ್ ಗಿಂತ ಹೆಚ್ಚಿನ ರಬ್ಬರ್ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ತೀವ್ರತೆಗೆ ಕೊಟ್ಟಿಗೆಯ ಚಾವಣಿ, ಗೋಡೆಗೂ ಹೆಚ್ಚಿನ ಹಾನಿ ಉಂಟಾಗಿದೆ. ಸುಮಾರು 3 ಲಕ್ಷ ರೂ. ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ.
ದಾಸ್ತಾನು ಕೊಠಡಿಯ ಸಮೀಪವೇ ಜಾನುವಾರುಗಳ ಹಟ್ಟಿ ಇದ್ದು ಅಲ್ಲಿಗೂ ಬೆಂಕಿ ಪಸರಿಸುವ ಸಾಧ್ಯತೆ ಇತ್ತು. ಸ್ಥಳೀಯರ ಹಾಗೂ ಬೆಳ್ತಂಗಡಿ ಅಗ್ನಿಶಾಮಕ ದಳದ ತುರ್ತು ಸ್ಪಂದನೆಯಿಂದ ಬೆಂಕಿಯನ್ನು ಹತೋಟಿಗೆ ತರಲಾದ ಕಾರಣ ಜಾನುವಾರು ಹಟ್ಟಿಗೆ ಹೆಚ್ಚಿನ ಹಾನಿ ಉಂಟಾಗಿಲ್ಲ ಎಂದು ತಿಳಿದುಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw