ಕಾಫಿನಾಡಲ್ಲಿ 3 ದಿನಗಳ ಕಾಲ ದತ್ತಜಯಂತಿ ಸಂಭ್ರಮ - Mahanayaka
12:30 AM Wednesday 12 - March 2025

ಕಾಫಿನಾಡಲ್ಲಿ 3 ದಿನಗಳ ಕಾಲ ದತ್ತಜಯಂತಿ ಸಂಭ್ರಮ

datta jayanti
12/12/2024

ಚಿಕ್ಕಮಗಳೂರು:   ಕಾಫಿನಾಡಲ್ಲಿ 3 ದಿನಗಳ ದತ್ತಜಯಂತಿ ಸಂಭ್ರಮ ಆಚರಿಸಲಾಗುತ್ತಿದೆ. ಮೊದಲ ದಿನದ ಕಾರ್ಯಕ್ರಮ ಅನುಸೂಯ ಜಯಂತಿ ಆರಂಭವಾಗಿದೆ. ನಗರದ ಬೋಳರಾಮೇಶ್ವರ ದೇವಾಲಯದಿಂದ ಮೆರವಣಿಗೆ‌ ಆರಂಭಗೊಂಡಿದೆ.

ದತ್ತಾತ್ರೇಯರ ತಾಯಿ ಅನುಸೂಯದೇವಿಗೆ ಮಹಿಳೆಯರಿಂದ ಪೂಜೆ ಸಲ್ಲಿಸಲಾಗುತ್ತಿದೆ. ಸಾವಿರಾರು ಮಹಿಳೆಯರು ಮೆರವಣಿಗೆ ನಡೆಸಿ ದತ್ತಪೀಠಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ.

ಬೋಳರಾಮೇಶ್ವರ ದೇವಾಲಯದಿಂದ ಟೌನ್ ಕ್ಯಾಂಟೀನ್ ವರೆಗೂ 2 ಕಿ.ಮೀ.ಮೆರವಣಿಗೆ ನಡೆಸಲಾಗುತ್ತಿದ್ದು,  ಪೊಲೀಸರ ಸರ್ಪಗಾವಲಿನಲ್ಲಿ ಮಹಿಳೆಯರ ಮೆರವಣಿಗೆ ಸಾಗುತ್ತಿದೆ.


Provided by

ಚಿಕ್ಕಮಗಳೂರು ನಗರ, ದತ್ತಪೀಠದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿದೆ. ಇಂದಿನಿಂದ 3 ದಿನಗಳ ಕಾಲ ದತ್ತಜಯಂತಿ ಕಾರ್ಯಕ್ರಮ ನಡೆಯಲಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ