ನಾಲ್ಕು ವರ್ಷದ ಬಳಿಕ ದತ್ತಪೀಠದಲ್ಲಿ ಕೇಶಮುಂಡನ ಮಾಡಿದ ಶ್ರೀರಾಮಸೇನಾ ಮುಖಂಡ

ಚಿಕ್ಕಮಗಳೂರು: ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಹಿನ್ನೆಲೆಯಲ್ಲಿ ಕೊಟ್ಟ ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ದತ್ತಪೀಠದಲ್ಲಿ ಮುಡಿ ನೀಡುವ ಮೂಲಕ ಹರಕೆ ತೀರಿಸಿದರು.
ಅರ್ಚಕರ ನೇಮಕ, ಮೂರ್ತಿ ಮೆರವಣಿಗೆಗೆ ಹರಕೆ ಹೊತ್ತಿದ್ದ ಗಂಗಾಧರ್ ಕುಲಕರ್ಣಿ, ನಾಲ್ಕು ವರ್ಷದಿಂದ ಕಟ್ಟಿಂಗ್, ಶೇವಿಂಗ್ ಮಾಡಿಸದೇ ಇದ್ದರು. ಇದೀಗ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಹಿನ್ನೆಲೆ ದತ್ತಪೀಠದಲ್ಲೇ ಕೇಶಮುಂಡನ ಮಾಡಿದ್ದಾರೆ.
ದತ್ತಪೀಠ ಆವರಣದ ಹೋಮ ಮಂಟಪದ ಪಕ್ಕ ಕೇಶಮುಂಡನ ಮಾಡಿದ್ದು, ಇತಿಹಾಸದಲ್ಲಿ ಮೊದಲ ಬಾರಿಗೆ ದತ್ತಪೀಠದಲ್ಲಿ ಮುಡಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸೇರಿ ಹಲವು ಮುಖಂಡರು ಭಾಗಿಯಾಗಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka