ಅತ್ತೆಯನ್ನು ಸಾಯಿಸಲು ಮಾತ್ರೆ ಕೊಡಿ: ವೈದ್ಯರ ಬಳಿ ಬೇಡಿಯಿಟ್ಟ ಸೊಸೆ!

ಬೆಂಗಳೂರು: ಅತ್ತೆಯನ್ನು ಕೊಲ್ಲಲು ವೈದ್ಯರ ಬಳಿ ಮಹಿಳೆಯೊಬ್ಬಳು ಮಾತ್ರೆ ಕೇಳಿದ ಘಟನೆಯೊಂದು ವರದಿಯಾಗಿದ್ದು, ಅತ್ತೆಯ ಕಾಟದಿಂದ ರೋಸಿ ಹೋದ ಸೊಸೆ, ಅತ್ತೆಯ ಕತೆ ಮುಗಿಸಲು ಮುಂದಾಗಿದ್ದು, ಅತ್ತೆಯನ್ನು ಸಾಯಿಸಲು ಮಾತ್ರೆ ಕೊಡಿ ಎಂದು ವೈದ್ಯರಿಗೆ ಮೆಸೆಜ್ ಮಾಡಿದ್ದಾಳೆ.
ಡಾ.ಸುನೀಲ್ ಕುಮಾರ್ ಎಂಬವರಿಗೆ ವಾಟ್ಸಾಪ್ ನಲ್ಲಿ ಮೆಸೆಜ್ ಮಾಡಿದ ಮಹಿಳೆಯೊಬ್ಬರು, ನಮ್ಮ ಅತ್ತೆ ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರಿಗೆ ವಯಸ್ಸಾಗಿದೆ, ಅವರನ್ನು ಸಾಯಿಸೋದು ಹೇಗೆ? ಒಂದೆರಡು ಮಾತ್ರ ಕೊಟ್ಟರೆ ಸಾಯುತ್ತಾರಲ್ಲ ಎಂದು ಕೇಳಿದ್ದಾಳೆ.
ಈ ವೇಳೆ ಆ ರೀತಿಯಾಗಿ ಕೇಳುವುದು ತಪ್ಪು ಎಂದು ವೈದ್ಯರು ಬುದ್ಧಿ ಮಾತು ಹೇಳುತ್ತಿದ್ದಂತೆಯೇ ವಾಟ್ಸಾಪ್ ಚಾಟ್ ಡಿಲೀಟ್ ಮಾಡಿದ ಮಹಿಳೆ ಡಾಕ್ಟರ್ ನಂಬರ್ ನ್ನು ಬ್ಲಾಕ್ ಮಾಡಿದ್ದಾರೆ. ಆದ್ರೆ ಡಾಕ್ಟರ್ ಇದಕ್ಕೂ ಮೊದಲೇ ಚಾಟ್ ಮಾಡಿದ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದರು. ತಕ್ಷಣವೇ ಅವರು ಸಂಜಯ್ ನಗರ ಪೊಲೀಸರಿಗೆ ಮಾಹಿತಿ ನೀಡಿ ದೂರು ನೀಡಿದ್ದಾರೆ.
ಸದ್ಯ ಮೆಸೆಜ್ ಬಂದಿದ್ದ ಮಹಿಳೆಯ ನಂಬರ್ ಸ್ವಿಚ್ಡ್ ಆಫ್ ಆಗಿದ್ದು, ಮಹಿಳೆಯ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಮಹಿಳೆಯ ಪತ್ತೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: