300 ಕೋಟಿ ಆಸ್ತಿ ಮೇಲೆ ಕಣ್ಣು: ಮಾವನನ್ನೇ ಹತ್ಯೆ ಮಾಡಿದ ಸೊಸೆ..!
ಮುನ್ನೂರು ಕೋಟಿ ರೂಪಾಯಿಯ ಆಸ್ತಿಯನ್ನು ಕಬಳಿಸುವುದಕ್ಕಾಗಿ ತನ್ನ ಮಾವನನ್ನೇ ಹತ್ಯೆಗೈದ ಸೊಸೆಯನ್ನು ನಾಗಪುರದಲ್ಲಿ ಬಂಧಿಸಲಾಗಿದೆ . 82 ವರ್ಷದ ಪುರುಷೋತ್ತಮ್ ಪುತ್ತೇ ವಾರ್ ಎಂಬವರು ವಾಹನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಎಂದೇ ನಂಬಲಾಗಿತ್ತು. ಆದರೆ ಪೊಲೀಸರು ಕೈಗೊಂಡ ತನಿಖೆಯಲ್ಲಿ ದಂಗುಬಡಿಸುವ ಸತ್ಯ ಹೊರ ಬಿದ್ದಿದೆ.
ಮಾವನನ್ನು ಕೊಲೆಗೈಯುವುದಕ್ಕಾಗಿ ಸೊಸೆ ಅರ್ಚನಾ ಒಂದು ಕೋಟಿ ರೂಪಾಯಿ ಸುಪಾರಿ ನೀಡಿದ್ದಳು. ಅಪಘಾತದಲ್ಲಿ ಮೃತಪಟ್ಟಿರುವುದಾಗಿ ತೋರಿಸುವುದು ಇವಳ ಉದ್ದೇಶವಾಗಿತ್ತು. ಈ ಹತ್ಯೆಯಲ್ಲಿ ಅರ್ಚನಾ ಪತಿಯ ಡ್ರೈವರ್ ಮತ್ತು ಇನ್ನಿಬ್ಬರು ಸೇರಿದ್ದಾರೆ. ಇವರೆಲ್ಲರನ್ನೂ ಕೂಡ ಬಂಧಿಸಲಾಗಿದೆ.
ಶಸ್ತ್ರಕ್ರಿಯೆಗೆ ಒಳಗಾಗಿದ್ದ ಪತ್ನಿಯನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಮನೆಗೆ ಮರಳುತ್ತಿದ್ದ 82 ವರ್ಷದ ಪುರುಷೋತ್ತಮ್ ಅವರನ್ನು ವಾಹನ ಅಪಘಾತದಲ್ಲಿ ಹತ್ಯೆ ಮಾಡಲಾಗಿದೆ. ಇವರ ಮಗ ಅಥವಾ ಅರ್ಚನಾಳ ಪತಿ ಮನೀಶ್ ವೈದ್ಯರಾಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth