ಡಬ್ಬಲ್ ಮರ್ಡರ್  | ಎರಡೇ ದಿನದಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು | ಸಿಬ್ಬಂದಿಗೆ  ಬಹುಮಾನ ಘೋಷಿಸಿದ ಎಸ್ಪಿ ಹನುಮಂತರಾಯ ಐ.ಪಿ.ಎಸ್. - Mahanayaka

ಡಬ್ಬಲ್ ಮರ್ಡರ್  | ಎರಡೇ ದಿನದಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು | ಸಿಬ್ಬಂದಿಗೆ  ಬಹುಮಾನ ಘೋಷಿಸಿದ ಎಸ್ಪಿ ಹನುಮಂತರಾಯ ಐ.ಪಿ.ಎಸ್.

02/11/2020

ವರದಿ: ಕೋಗಲೂರು ಕುಮಾರ್

ದಾವಣಗೆರೆ; ಅಕ್ರಮ ಸಂಬಂಧ ಎಂದು ಆರೋಪಿಸಿ  ಪತ್ನಿ ಮತ್ತು ಪತ್ನಿಯ ಪ್ರಿಯಕರನನ್ನು ಕೊಲೆ ಮಾಡಿ ಪತಿ ಜೈಲು ಸೇರಿದ್ದು,  ಎರಡು ಮುದ್ದಾದ ಮಕ್ಕಳು ಅನಾಥರಾಗಿದ್ದಾರೆ .  ಇಂತಹದೊಂದು ದುರಂತ ನಡೆದಿರುವುದು ದಾವಣಗೆರೆ ಹೊನ್ನಾಳಿ ಮತ್ತು ಚನ್ನಗಿರಿಯಲ್ಲಿ,


ಕಳೆದ 9 ವರ್ಷಗಳ  ಶಿವಕುಮಾರ್ ಮತ್ತು ಕಾರಿಗನೂರು ಕ್ರಾಸ್ ನಿವಾಸಿ ಶ್ವೇತಳನ್ನು ಪ್ರೀತಿಸಿ ಮದುವೆಯಾಗಿದ್ದರು. ಶ್ವೇತಳ ಊರಾದ ಕಾರಿಗನೂರು ಕ್ರಾಸ್ ಬಳಿಯೆ  ಮನೆಯನ್ನು ಮಾಡಿಕೊಂಡು ಜೀವನ ನಡೆಸುತ್ತಿರುತ್ತಾರೆ .ವೃತ್ತಿಯಲ್ಲಿ ಶಿವಕುಮಾರ್ ಖಾಸಗಿ ಶಾಲಾ ಶಿಕ್ಷಕನಾಗಿರುತ್ತಾನೆ. ಪತಿ ಶಾಲೆಗೆ ಹೋದ ಸಂದರ್ಭದಲ್ಲಿ ಅದೇ ಗ್ರಾಮದ ಅವಿವಾಹಿತ ವೇದಮೂರ್ತಿಯ ಜೊತೆ ಅನೈತಿಕ ಸಂಬಂದವನ್ನು ಆಕೆ ಹೊಂದಿದ್ದಳು ಎಂದು ಆರೋಪಿಸಿದ್ದನು. ಈ ವಿಚಾರವಾಗಿ ಪತಿ ಪತ್ನಿ ಶ್ವೇತಳಿಗೆ ಸಾಕಷ್ಠು ಭಾರಿ ಬುದ್ದಿವಾದ ಹೇಳಿದ್ದನು ಎನ್ನಲಾಗಿದೆ.


ಇದೇ ವಿಚಾರವಾಗಿ ದಿನಾಂಕ 28/10/2020 ರಂದು ಮನೆಯಲ್ಲಿ ಗಂಡ ಹೆಂಡತಿಗೆ ಜಗಳವಾಗಿದ್ದು, ಇದೆ ದಿನ ಶ್ವೇತ ತನ್ನ ಮಗಳನ್ನು ಕರೆದುಕೊಂಡು ಮನೆಬಿಟ್ಟು ಪ್ರಿಯಕರನೊಂದಿಗೆ ಹೊನ್ನಾಳಿಗೆ ತೆರಳುತ್ತಾಳೆ . ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರ ಹೊನ್ನಾಳಿ ತುಂಗಭದ್ರಾ ಹೊಳೆಯ ದಂಡೆಯಲ್ಲಿರುವುದು ಶ್ವೇತಳ ಪತಿ ಶಿವಕುಮಾರನಿಗೆ  ಗೊತ್ತಾಗುತ್ತದೆ. ತಕ್ಷಣ ಶಿವಕುಮಾರ್ ತನ್ನ ಇನ್ನೊಬ್ಬ ಸ್ನೇಹಿತನನ್ನು ಕಾರಲ್ಲಿ ಕರೆದುಕೊಂಡು ಅವರಿರುವ ಸ್ಥಳಕ್ಕೆ ಬಂದು ವೇದಮೂರ್ತಿಯನ್ನು ಕೊಲೆಮಾಡಿ ನೀರಿನಲ್ಲಿ ಬಿಸಾಡಿ ಪತಿ ಪತ್ನಿ ಕಾರಿಗನೂರಿಗೆ ಬರುತ್ತಾರೆ ,ನಂತರ ನಾವಿಬ್ಬರೂ ಸಾಯೋಣ ಎನ್ನುವ ತೀರ್ಮಾನಕ್ಕೆ ಇವರು ಬರುತ್ತಾರೆ . ಅತ್ಮಹತ್ಯೆ ಮಾಡಿಕೊಳ್ಳುವ ಉಧ್ದೇಶದಿಂದ ಸೂಳೆಕೆರೆಗೆ ಬರುತ್ತಾರೆ ಅಲ್ಲಿ ಆತ್ಮಹತ್ಯೆ ಸಾದ್ಯವಾಗದೆ  ಚನ್ನಗಿರಿಗೆ ಬಂದು ವಿಷ ಕುಡಿದು ಸಾಯೋಣ ಎನ್ನುತ್ತಾರೆ , ಆ ದಿನ ಯಾವುದೇ ಅಂಗಡಿಗಳು ಬಾಗಿಲು ತೆರದಿರುವುದಿಲ್ಲ. ಶಿವಕುಮಾರ ತನ್ನ ಪತ್ನಿಯನ್ನು ಕರೆದುಕೊಂಡು  ಬಿರೂರು ಸಮ್ಮಸ್ಸಗಿ ರಸ್ತೆಯ ಮೂಲಕ ಹೋಗುವಾಗ ರಾಜಗೊಂಡನಹಳ್ಳಿ ಗ್ರಾಮದ ಒಂದು ತೋಟಕ್ಕೆ ಕರೆದುಕೊಂಡು ಹೋಗಿ ಶ್ವೇತಳನ್ನು ಕೊಲೆ ಮಾಡಿ ಕೃಷಿ ಹೊಂಡಕ್ಕೆ ಎಸೆದು ಹೋಗಿರುತ್ತಾನೆ .





ಈ ಪ್ರಕರಣವನ್ನು ಬೆನ್ನಟ್ಟಿದ ಚನ್ನಗಿರಿ ಹಾಗೂ ಹೊನ್ನಾಳಿ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ವರಿಷ್ಠಾದಿಕಾರಿಗಳಾದ ಹನುಮಂತರಾಯ ಐಪಿಎಸ್ ರವರು ತಮ್ಮ ಕಚೇರಿಯಲ್ಲಿ ಸುಧ್ಧಿಗೋಷ್ಠಿಯಲ್ಲಿ ತಿಳಿಸಿರುತ್ತಾರೆ.


ಸುಧ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೋಲೀಸ್ ಅದೀಕ್ಷರಾದ ಎಮ ರಾಜೀವ್ , ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಜಿ ಮುನ್ನೂಳಿ ,ಚನ್ನಗಿರಿ ವೃತ್ತ ನಿರೀಕ್ಷಕರಾಧ ಆರ್ ಆರ್ ಪಾಟೀಲ್ ಪಿಎಸ್ಐ ಜಿ ಜಗದೀಶ್ ಇದ್ದರು  . ಈ ಪ್ರಕರಣವನ್ನು ಕೇವಲ ಎರಡೆ ದಿನದಲ್ಲಿ ಬೇದಿಸಿದ ಪೋಲೀಸ್ ತಂಡಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಸೂಕ್ತ ಬಹುಮಾನ ನೀಡುವುದಾಗಿ ಈ ಸಂದರ್ಭದಲ್ಲಿ ಘೋಷಿಸಿರುತ್ತಾರೆ .

prashanth g munnoli

ತಾಲೂಕಿನ ರಾಜಗೊಂಡನಹಳ್ಳಿ ಜಮೀನೊಂದರಲ್ಲಿ ವಿವಾಹಿತ ಮಹಿಳೆ ಶ್ವೇತ ಎಂಬುವವರ ಮೃತದೇಹ ಪತ್ತೆ ಆಗುತ್ತೆ.ಮೃತಳ ಸಹೋದರ ದಿನಾಂಕ 29/10/2020 ರಂದು ನನ್ನ ತಂಗಿಯನ್ನು  ಆಕೆಯ ಗಂಡ  ಶಿವಕುಮಾರನೇ ಕೊಲೆ ಮಾಡಿರುವುದಾಗಿ ಚನ್ನಗಿರಿ ಪೋಲಿಸ್ ಠಾಣೆಯಲ್ಲಿ ದೂರು ನೀಡುತ್ತಾನೆ. ಇದೆ ದಿನ ಹೊನ್ನಾಳಿಯ ಪ್ರವಾಸಿ ಮಂದಿರ ಹಿಂಬಾಗ ತುಂಗಾಭದ್ರ ನದಿಯಲ್ಲಿ ಒಂದು ಮೃತದೇಹ ಪತ್ತೆ ಆಗುತ್ತದೆ ಇವನು ಕಾರಿಗನೂರು ಗ್ರಾಮದ ವೇದಮೂರ್ತಿ ಎನ್ನುವ ಮಾಹಿತಿ ತಿಳಿಯುತ್ತದೆ . ವಿಷಯ ತಿಳಿದ  ಮೃತನ ಸಹೋದರನಾದ ಮಧು ನಮ್ಮ ತಮ್ಮಾ ಅರ್ಜಿ ಸಲ್ಲಿಸಲು ದಾವಣಗೆರೆ ಹೋಗುವುದಾಗಿ ದಿನಾಂಕ 28 ರಂದು ಮನೆಬಿಟ್ಟು ಹೋಗಿದ್ದನು ಎಂದು ಮೃತನ ಅಣ್ಣ  ಹೊನ್ನಾಳಿ ಪೋಲೀಸ್ ಠಾಣೆಯಲ್ಲಿ ದೂರನ್ನು ನೀಡುರುತ್ತಾರೆ .ಒಂದೇ ದಿನ ಮೃತದೇಹಗಳು ಪತ್ತೆಯಾಗಿರುವುದನ್ನು ಕಂಡು ಒಂದಕ್ಕೊಂದು ಸಂಬಂಧವಿರುವುದು ಕಂಡು ಬಂದಿತು , ಮಾನ್ಯ ಜಿಲ್ಲಾ ರಕ್ಷಣಾಧಿಕಾರಿಗಳಾದ ಹನುಮಂತರಾಯ ಐಪಿಎಸ್ ಹಾಗೂ ನಾವುಗಳ ಮಾರ್ಗದರ್ಶನದಲ್ಲಿ ಚನ್ನಗಿರಿ ವೃತ್ತ ನಿರೀಕ್ಷರಾದ ಆರ್ ಆರ್ ಪಾಟೀಲ್ ಹಾಗೂ ಪಿಎಸ್ಐ ಗಳಾದ ಜೆ ಜಗದೀಶ್ ಮತ್ತು ಶ್ರೀಮತಿ ರೂಪ್ಲೀಬಾಯಿ (ಕ್ರೈಂ ವಿಬಾಗದ) ಹೊನ್ನಾಳಿ ವೃತ್ತನಿರೀಕ್ಷಕರಾದ ದೇವರಾಜ್ ತಂಡವನ್ನು ರಚಿಸುತ್ತೇವೆ ಕೇವಲ ಎರಡೇ ದಿನದಲ್ಲಿ ಆರೋಪಿಯನ್ನು ಬಂಧಿಸಿ ಸೂಕ್ತ ವಿಚಾರಣೆ ನಡೆಸಿದಾಗ ಸತ್ಯ ಗೊತ್ತಾಗಿದೆ.  ಇನ್ನೊಬ್ಬ ಇವನ ಸ್ನೇಹಿತ ಆರೋಪಿ ತಲೆಮರೆಸಿಕೊಂಡಿದ್ದು ಬಲೆ ಬೀಸಿದ್ದೇವೆ ಕೆಲವೇ ದಿನಗಳಲ್ಲಿ ಆರೋಪಿಯನ್ನು ಬಂಧಿಸಲಾಗುವುದೆಂದು ಎಂದರು, ಕಾರ್ಯಾಚರಣೆಯ ತಂಡದಲ್ಲಿದ್ದ ಸಿಬ್ಬಂದಿ ರುದ್ರೇಶ್ ಹೆಚ್ ಸಿ ,ಮಂಜುನಾಥ್ , ರುದ್ರೇಶ್ , ಮೊಹಮದ್ಖಾನ್ ,ದರ್ಮಪ್ಪ ,ಪ್ರವೀಣ್ ಗೌಡ, ಜೀಪ್ ಚಾಲಕರಾದ ರವಿ,ರಘು ರೇವಣಸಿದ್ದಪ್ಪ ಇದ್ದರು.

– ಡಿವೈಎಸ್ಪಿ ಪ್ರಶಾಂತ್ ಜಿ ಮುನ್ನೂಳಿ ಚನ್ನಗಿರಿ ವಿಭಾಗ





ಇತ್ತೀಚಿನ ಸುದ್ದಿ