ಅದೃಷ್ಟ ದೇವತೆಯನ್ನು ಬಟ್ಟೆ ಬಿಚ್ಚಿ ಬೆಡ್ ರೂಮ್ ನಲ್ಲಿ ಕೂರಿಸಬೇಕು: ವಿವಾದ ಸೃಷ್ಟಿಸಿದ ‘ಡಿ’ಬಾಸ್ ಮಾತುಗಳು
ಸದಾ ಒಂದಲ್ಲ ಒಂದು ವಿವಾದಕ್ಕೆ ಆಗಾಗ ಸಿಲುಕುವ ‘ಡಿ’ಬಾಸ್ ದರ್ಶನ್ ಇದೀಗ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದು, ಸಂದರ್ಶನವೊಂದರಲ್ಲಿ ಅದೃಷ್ಟ ದೇವತೆಗೆ ಅವಮಾನ ಮಾಡಿದ್ದಾರೆ ಎಂದು ಕೆಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಕ್ರಾಂತಿ ಸಿನಿಮಾದ ಕುರಿತಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಅದೃಷ್ಟ ದೇವತೆ ಯಾವಾಗಲೂ ಬಾಗಿಲು ತಟ್ಟುವುದಿಲ್ಲ, ಯಾವಾಗ ಆಕೆ ಬಾಗಿಲು ತಟ್ಟುತ್ತಾಳೋ ಆವಾಗ, ಅವಳನ್ನು ಹಿಡಿದು ತಂದು ಬಟ್ಟೆ ಬಿಚ್ಚಿ ಬೆಡ್ ರೂಮ್ ನಲ್ಲಿ ಕೂರಿಸಬೇಕು, ಬಟ್ಟೆ ಕೊಟ್ಟರೆ ಆಕೆ ಇನ್ನೊಬ್ಬರ ಮನೆಗೆ ಹೋಗುತ್ತಾಳೆ ಎಂದು ಹೇಳಿಕೆ ನೀಡಿದ್ದಾರೆ.
ನಟ ದರ್ಶನ್ ನೀಡಿರುವ ಹೇಳಿಕೆಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ದೇವರ ಬಗ್ಗೆ ದರ್ಶನ್ ಅವರು ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ವಿಡಿಯೋ ತುಣುಕನ್ನು ವೈರಲ್ ಮಾಡಿದ್ದಾರೆ.
ದರ್ಶನ್ ಅವರು ಅದೃಷ್ಟದ ಕುರಿತಾಗಿ ಮಾತನಾಡುತ್ತಾ ಉದಾಹರಣೆಯಾಗಿ ಈ ಮಾತನ್ನು ಹೇಳಿದ್ದರು, ಬಂದ ಅದೃಷ್ಟವನ್ನು ಮನೆಯಿಂದ ಹೋಗಲು ಬಿಡಬಾರದು ಅನ್ನೋ ಅರ್ಧದಲ್ಲಿ ಅವರು ಹೇಳಿಕೆ ನೀಡಿದ್ದಾರೆಯಾದರೂ, ಅವರು ವರ್ಣಿಸಿರುವ ಮಾತುಗಳು ಇದೀಗ ಒಂದಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಕೆಲವರು ಇದು ಒಂದು ವಿವಾದನೇ ಅಲ್ಲ, ಜನರು ಆಡುಭಾಷೆಯಲ್ಲಿ ಸಾಮಾನ್ಯವಾಗಿ ಬಳಸುವ ಪದವಾಗಿದೆ. ದರ್ಶನ್ ಅವರು ಎಲ್ಲರಂತೆಯೇ ಮಾತನಾಡಿದ್ದಾರೆ. ಅದನ್ನು ವಿವಾದ ಮಾಡುವ ಅಗತ್ಯವಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka