ನಾಪತ್ತೆಯಾಗಿದ್ದ ತಾಯಿ-ಮಗಳ ಮೃತದೇಹ ನದಿಯಲ್ಲಿ ಪತ್ತೆ!
13/02/2024
ಕಲಬುರಗಿ: ಸೋಮವಾರ ಸಂಜೆ ನಾಪತ್ತೆಯಾಗಿದ್ದ ತಾಯಿ ಮಗಳ ಮೃತದೇಹ ನದಿಯಲ್ಲಿ ಪತ್ತೆಯಾದ ಘಟನೆ ನಡೆದಿದ್ದು, ತಾಯಿ ಮಗಳು ಸಾವಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಎಂ.ಬಿ.ನಗರದ ತಾಯಿ ಸುಮಲತಾ(45) ಹಾಗೂ ಮಗಳು ವರ್ಷಾ(22) ಮೃತಪಟ್ಟವರಾಗಿದ್ದು, ಶಹಾಬಾದ್ ಸಮೀಪದ ಕಾಗಿಣಾ ನದಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ.
ಜೀವನದಲ್ಲಿ ಜಿಗುಪ್ಸೆಗೊಂಡು ತಾಯಿ ಮಗಳು ಸಾವಿಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.