ಕೈಗಳನ್ನು ಕಟ್ಟಿದ ಸ್ಥಿತಿಯಲ್ಲಿ ಮಹಿಳೆಯರ ಬೆತ್ತಲೆ ಮೃತದೇಹ ಪತ್ತೆ: ರಷ್ಯಾ ಸೈನಿಕರ ಕ್ರೂರತೆ ಎಂದ ಉಕ್ರೇನ್ - Mahanayaka

ಕೈಗಳನ್ನು ಕಟ್ಟಿದ ಸ್ಥಿತಿಯಲ್ಲಿ ಮಹಿಳೆಯರ ಬೆತ್ತಲೆ ಮೃತದೇಹ ಪತ್ತೆ: ರಷ್ಯಾ ಸೈನಿಕರ ಕ್ರೂರತೆ ಎಂದ ಉಕ್ರೇನ್

ukraines bucha
04/04/2022

ಕೀವ್ ಬಳಿ ರಷ್ಯಾ ಸೇನೆಯು  400ಕ್ಕೂ ಹೆಚ್ಚು ನಾಗರಿಕರನ್ನು ಹತ್ಯೆ ಮಾಡಿದೆ ಎಂದು ಉಕ್ರೇನ್ ಆರೋಪಿಸಿದೆ.  ಬುಚಾ ಪಟ್ಟಣದಲ್ಲಿ 410 ಮೃತದೇಹಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಷ್ಯಾ ಮೇಲೆ ವಿಶ್ವವು ಕಠಿಣ ನಿರ್ಬಂಧಗಳನ್ನು ವಿಧಿಸಬೇಕೆಂದು ಉಕ್ರೇನ್ ಆಗ್ರಹಿಸಿದೆ.  ರಷ್ಯಾ ನರಮೇಧ ಮಾಡಿದೆ ಎಂದು ಉಕ್ರೇನ್ ಅಧ್ಯಕ್ಷ ಸೆಲೆನ್ಸ್ಕಿ ಟೀಕಿಸಿದ್ದಾರೆ .

ಒಂದು ತಿಂಗಳ ಮಧ್ಯದಲ್ಲಿ ರಷ್ಯಾ ಇಂತಹದೊಂದು ದೊಡ್ಡ ಹತ್ಯಾಕಾಂಡ ಮಾಡಿದೆ ಎಂದು ಉಕ್ರೇನ್ ಆರೋಪಿಸಿದೆ. ಪತ್ತೆಯಾದ ಒಂಬತ್ತು ಮೃತ ದೇಹಗಳಲ್ಲಿ ಮಹಿಳೆಯರೂ ಸೇರಿದ್ದು, ಮಹಿಳೆಯರ ಕೈಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

US ಮತ್ತು EU ಅಧಿಕಾರಿಗಳು ಘಟನೆಯನ್ನು ಅವಲೋಕಿಸಿದೆ. ಅದೇ ರೀತಿ ಉಕ್ರೇನ್‌ನಲ್ಲಿ ರಷ್ಯಾ ಅಪರಾಧ ಎಸಗುತ್ತಿದೆ  ಎಂದು “ಹ್ಯೂಮನ್ ರೈಟ್ಸ್ ವಾಚ್” ಆರೋಪಿಸಿದೆ..

ಕೈವ್‌ ನ ಸಂಪೂರ್ಣ ನಿಯಂತ್ರಣವನ್ನು ಮರಳಿ ಪಡೆದಿದೆ, ಬುಚಾ ಸೇರಿದಂತೆ ಕೀವ್‌ ನ ಹತ್ತಿರದ ಪ್ರದೇಶಗಳಿಂದ ರಷ್ಯಾ ಹಿಂದೆ ಸರಿದಿದೆ  ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಷ್ಯಾದ ಗುಂಡಿನ ದಾಳಿಯಲ್ಲಿ ಉಕ್ರೇನಿಯನ್ ಫೋಟೋ ಜರ್ನಲಿಸ್ಟ್ ಸಾವು

ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ ಲೈಂಗಿಕ ದೌರ್ಜನ್ಯ: ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ

ರಣಬೀರ್ ಕಪೂರ್ ಜೊತೆ ನಟಿಸಲಿದ್ದಾರೆ ರಶ್ಮಿಕಾ ಮಂದಣ್ಣ

ನಟಿ ಮಲೈಕಾ ಅರೋರಾ ಕಾರು ಅಪಘಾತ; ತಲೆಗೆ ತೀವ್ರವಾದ ಏಟು

ಸಸ್ಯಾಹಾರಿಗಳಿಗೇಕೆ ಹಲಾಲ್, ಜಟ್ಕಾ ಕಟ್ ಉಸಾಬರಿ?

ಇತ್ತೀಚಿನ ಸುದ್ದಿ