ದೇವರುಮನೆ ಗುಡ್ಡದಲ್ಲಿ ಯುವಕನ ಮೃತದೇಹ ಪತ್ತೆ: ಹತ್ಯೆ ಮಾಡಿ ಎಸೆದಿರುವ ಶಂಕೆ - Mahanayaka
5:22 AM Wednesday 11 - December 2024

ದೇವರುಮನೆ ಗುಡ್ಡದಲ್ಲಿ ಯುವಕನ ಮೃತದೇಹ ಪತ್ತೆ: ಹತ್ಯೆ ಮಾಡಿ ಎಸೆದಿರುವ ಶಂಕೆ

devaru mane
08/06/2023

ಕೊಟ್ಟಿಗೆಹಾರ: ಪ್ರಸಿದ್ಧ  ಪ್ರವಾಸಿತಾಣ ದೇವರುಮನೆ ಗುಡ್ಡದಲ್ಲಿ ಯುವಕನೋರ್ವನ ಶವ ಪತ್ತೆಯಾಗಿದ್ದು, ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರುಮನೆಯಲ್ಲಿ ಈ ಘಟನೆ ನಡೆದಿದ್ದು, ದೇವರು ಮನೆ ಗುಡ್ಡದ ರಸ್ತೆ ತಿರುವಿನಲ್ಲಿ ಮೃತದೇಹ ಪತ್ತೆಯಾಗಿದೆ.

ಇಲ್ಲಿನ ಪ್ರವಾಸಿಗರು ಮೃತದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಬಣಕಲ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇನ್ನೂ ಯುವಕನನ್ನು ಕೊಂದು ಇಲ್ಲಿ ಮೃತದೇಹವನ್ನು ಎಸೆದರೇ? ಎಂಬ ಅನುಮಾನಗಳು ಕೇಳಿ ಬಂದಿವೆ. ಪೊಲೀಸರ ತನಿಖೆಯಿಂದ ಘಟನೆಯ ರಹಸ್ಯ ಬಯಲಾಗಬೇಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ