ಬಿಆರ್ ಟಿ ಕಾಡಿನಲ್ಲಿ ಗಸ್ತು ನಡೆಸುವಾಗ ಚಿರತೆಯ ಮೃತದೇಹ ಪತ್ತೆ
ಚಾಮರಾಜನಗರ: ಚಿರತೆ ಶವವೊಂದು ಪತ್ತೆಯಾಗಿರುವ ಘಟನೆ ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೆ ಬರುವ ಹನೂರು ತಾಲೂಕಿನ ಪಿ.ಜಿ.ಪಾಲ್ಯ ಶಾಖೆಯ ಮಾವತ್ತೂರು ಗಸ್ತಿನ ಕರಿಬೇಬು ಬೆಟ್ಟ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಮೃತ ಗಂಡು ಚಿರತೆಗೆ 10 ವರ್ಷಗಳಾಗಿರಬಹುದು ಎಂದು ಅಂದಾಜು ಮಾಡಲಾಗಿದ್ದು ಮೃತ ಚಿರತೆಯ ಹಲ್ಲು, ಚರ್ಮ, ಉಗುರುಗಳು ಸುರಕ್ಷಿತವಾಗಿದೆ ಎಂದು ಬಿಆರ್ ಟಿ ಎಸಿಎಫ್ ಮಹಾದೇವಯ್ಯ ಮಾಹಿತಿ ನೀಡಿದ್ದಾರೆ.
ಮುಖ್ಯ ಪಶು ವೈದ್ಯಾಧಿಕಾರಿಯು ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ಚಿರತೆ ಕಳೇಬರವನ್ನು ಸುಡಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw