ಅಪಾರ್ಟ್ ಮೆಂಟ್ ನಲ್ಲಿ ದಂಪತಿಯ ಮೃತದೇಹ ಪತ್ತೆ: ಪತ್ನಿಯನ್ನು ಕೊಂದು ಸಾವಿಗೆ ಶರಣಾಗಿರುವ ಶಂಕೆ
ಪತಿ ಪತ್ನಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಂಗಳೂರಿನ ಬಿಜೈ ಕಾಪಿಕಾಡ್ ಅಪಾರ್ಟ್ ಮೆಂಟ್ ವೊಂದರಲ್ಲಿ ನಡೆದಿದೆ. ದಿನೇಶ್ ರಾವ್ (65) ಹಾಗೂ ಶೈಲಜಾ (64) ಅವರು ಶವವಾಗಿ ಪತ್ತೆಯಾಗಿದ್ದಾರೆ.
ಶೈಲಜಾ ಅವರು ಮಲಗಿದ್ದಲ್ಲೇ ಸಾವನ್ನಪ್ಪಿದ್ದ ರೀತಿಯಲ್ಲಿ ಪತ್ತೆಯಾದ್ರೆ ಇದ್ರ ಪಕ್ಕದ ಕೋಣೆಯಲ್ಲಿಯೇ ಪತಿ ಸಾವಿಗೆ ಶರಣಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದಿನೇಶ್ ರಾವ್ ನಿವೃತ್ತ ಕೆನರಾ ಬ್ಯಾಂಕ್ ಉದ್ಯೋಗಿ ಆಗಿದ್ದರು. ಪತ್ನಿ ಶೈಲಜಾ ಕೆಲ ವರ್ಷಗಳಿಂದ ಮಲಗಿದಲ್ಲೇ ಇದ್ದರು. ರಾತ್ರಿ ಮತ್ತು ಹಗಲಿನಲ್ಲಿ ಹೋಮ್ ನರ್ಸ್ ಇರುತ್ತಿದ್ದರು.
ರಾತ್ರಿ ಬಂದಿದ್ದ ಹೋಮ್ ನರ್ಸ್ ಬೆಳಿಗ್ಗೆ 6:30 ಕ್ಕೆ ಮನೆಗೆ ಬಂದಿದ್ದರು. ನಂತರ 8:30ರ ವೇಳೆಗೆ ಮತ್ತೊಬ್ಬ ಹೋಮ್ ನರ್ಸ್ ಬಂದಿದ್ದ ವೇಳೆ ಮನೆ ಬಾಗಿಲು ಹಾಕಲಾಗಿತ್ತು. ಬಳಿಕ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಪತ್ನಿ ಶೈಲಜಾರನ್ನು ಉಸಿರು ಕಟ್ಟಿಸಿ ಕೊಲೆ ಮಾಡಿ ದಿನೇಶ ರಾವ್ ಸಾವಿಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.
ಇವರಿಗೆ ಇಬ್ಬರು ಹೆಣ್ಮಕ್ಕಳಿದ್ದು ಅಮೆರಿಕದಲ್ಲಿ ಉದ್ಯೋಗದಲ್ಲಿದ್ದಾರೆ. ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ದಿನೇಶ್ ರಾವ್, ಪತ್ನಿ ಸ್ಥಿತಿಯಿಂದಾಗಿ ಖಿನ್ನರಾಗಿದ್ದರು. ಇದೇ ಚಿಂತೆಯಲ್ಲಿ ಸಾವಿಗೆ ಶರಣಾಗಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ. ಉರ್ವ ಠಾಣೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ಧಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ:https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw