ಸುಳ್ಯ: ಬಾಡಿಗೆ ಮನೆಯಲ್ಲಿ ಗೋಣಿ ಚೀಲದಲ್ಲಿ ಮಹಿಳೆಯ ಮೃತದೇಹ ಪತ್ತೆ: ಪತಿಯಿಂದಲೇ ಹತ್ಯೆಯ ಶಂಕೆ

crime news
22/11/2022

ಸುಳ್ಯ: ಬಾಡಿಗೆ ಮನೆಯೊಂದರಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೀರಮಂಗಲದಲ್ಲಿ ನಡೆದಿದ್ದು, ಪತಿಯೇ ಹತ್ಯೆಗೈದು ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಸುಳ್ಯದ ಹೊಟೇಲ್ ವೊಂದರಲ್ಲಿ ಕೆಲಸದಲ್ಲಿರುವ ಇಮ್ರಾನ್ ಎಂಬಾತ ತನ್ನ ಪತ್ನಿಯ ಜೊತೆಗೆ ಆರು ತಿಂಗಳಿನಿಂದ ಈ ಬಾಡಿಗೆ ಮನೆಯಲ್ಲಿ ವಾಸವಿದ್ದ ಎನ್ನಲಾಗಿದೆ. ಎರಡು ದಿನಗಳ ಹಿಂದೆ ಊರಿಗೆ ತೆರಳುವುದಾಗಿ ಹೇಳಿ ಹೊಟೇಲ್ ನಿಂದ ತೆರಳಿದ್ದ.

ಇತ್ತ ಕೆಲವು ದಿನಗಳ ಹಿಂದೆ ಮಹಿಳೆ ಕಿರುಚಿಕೊಂಡ ಶಬ್ದ ಸ್ಥಳೀಯರಿಗೆ ಕೇಳಿತ್ತು. ಇಮ್ರಾನ್ ಊರಿಗೆ ತೆರಳಿದಾಗ ಒಬ್ಬನೇ ತೆರಳಿದ್ದ ಹೀಗಾಗಿ ಅಕ್ಕಪಕ್ಕದ ರೂಮ್ ನವರಿಗೆ ಅನುಮಾನ  ಮೂಡಿತ್ತು. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಇಂದು ಸಂಜೆ ಪೊಲೀಸರು ರೂಮ್ ನ ಬಾಗಿಲು ಒಡೆದು ನೋಡಿದಾಗ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿಧಿ ವಿಜ್ಞಾನ ತಜ್ಞರು ಸ್ಥಳಕ್ಕೆ ಆಗಮಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version