ಪಾಟ್ನಾ ಆಸ್ಪತ್ರೆಯಲ್ಲಿ ಸತ್ತ ರೋಗಿಯ ಕಣ್ಣು ನಾಪತ್ತೆ: ‘ಇಲಿ ಕಚ್ಚಿ ತಿಂದಿದೆ’ ಎಂದ ಆಸ್ಪತ್ರೆ ಸಿಬ್ಬಂದಿ

17/11/2024

ಪಾಟ್ನಾದ ನಳಂದಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶನಿವಾರ ನಿಧನರಾದ ಕೆಲವೇ ಗಂಟೆಗಳಲ್ಲಿ ವ್ಯಕ್ತಿಯೊಬ್ಬನ ಕಣ್ಣು ಕಾಣೆಯಾಗಿದೆ.
ಈ ಪ್ರಕರಣದಲ್ಲಿ ವೈದ್ಯಕೀಯ ನಿರ್ಲಕ್ಷ್ಯವಿದೆ ಎಂದು ಆರೋಪಿಸಿ ಫಂಟುಶ್ ಎಂಬ ವ್ಯಕ್ತಿಯ ಕುಟುಂಬವು ಆಸ್ಪತ್ರೆ ಆವರಣದೊಳಗೆ ಪ್ರತಿಭಟನೆ ನಡೆಸಿತು. ಆದರೆ, ಆತನ ಕಣ್ಣನ್ನು ಇಲಿ ತಿಂದಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ.

ಪೊಲೀಸರ ಪ್ರಕಾರ, ಅಪರಿಚಿತ ದಾಳಿಕೋರರು ಗುಂಡು ಹಾರಿಸಿದ ನಂತರ ಫಂಟುಶ್ ಅವರನ್ನು ನವೆಂಬರ್ 14 ರಂದು ಆಸ್ಪತ್ರೆಗೆ ದಾಖಲಿಸಲಾಯಿತು. ನವೆಂಬರ್ 15ರಂದು ಶಸ್ತ್ರಚಿಕಿತ್ಸೆಗೆ ಒಳಗಾದ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು. ಫಂಟುಶ್ ಶುಕ್ರವಾರ ರಾತ್ರಿ ನಿಧನರಾದರು‌ ಆದರೆ ರಾತ್ರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಾಗದ ಕಾರಣ ಅವರ ದೇಹವನ್ನು ಐಸಿಯು ಹಾಸಿಗೆಯ ಮೇಲೆ ಇರಿಸಲಾಗಿತ್ತು.

ಶನಿವಾರ ಬೆಳಿಗ್ಗೆ ಅವರ ಕುಟುಂಬವು ಅವರ ಎಡ ಕಣ್ಣು ಕಾಣೆಯಾಗಿದೆ ಎಂದು ಪತ್ತೆಹಚ್ಚಿದೆ. ಇದೇ ವೇಳೆ ಸಂಬಂಧಿಕರೊಬ್ಬರು ಶಸ್ತ್ರಚಿಕಿತ್ಸಾ ಬ್ಲೇಡ್ ಮೇಜಿನ ಬಳಿ ಕಂಡುಬಂದಿದೆ ಎಂದು ಹೇಳಿದ್ದಾರೆ.
ಪ್ರಕರಣದ ತನಿಖೆಗಾಗಿ ನಾಲ್ವರು ಸದಸ್ಯರ ತಂಡವನ್ನು ರಚಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಳಂದ ಆಸ್ಪತ್ರೆಯ ಸೂಪರಿಂಟೆಂಡೆಂಟ್ ತಿಳಿಸಿದ್ದಾರೆ.

“ಒಂದೋ ಯಾರಾದರೂ ಕಣ್ಣನ್ನು ಹೊರತೆಗೆದಿರಬಹುದು ಅಥವಾ ಇಲಿ ಕಣ್ಣನ್ನು ತಿಂದಿರಬಹುದು. ಈ ಎರಡೂ ಸಂದರ್ಭಗಳಲ್ಲಿ ಇದು ನಮ್ಮ ತಪ್ಪೇ. ತನಿಖೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು “ಎಂದರು.
ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version