ಡೆತ್ ನೋಟ್ ಬರೆದಿಟ್ಟು ಇಡೀ ಕುಟುಂಬವೇ ನಾಪತ್ತೆ! | ಆತಂಕದಲ್ಲಿ ಸಂಬಂಧಿಕರು
ಬೆಂಗಳೂರು: ಡೆತ್ ನೋಟ್ ಬರೆದಿಟ್ಟು ಇಡೀ ಕುಟುಂಬವೇ ನಾಪತ್ತೆಯಾದ ಆತಂಕಕಾರಿ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದು, ಇಲ್ಲಿನ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಗಾಂಧಿ, ಶಾಲಿನಿ, ಭಾನುಶ್ರೀ, ಹೇಮಶ್ರೀ ನಾಪತ್ತೆಯಾದವರಾಗಿದ್ದಾರೆ. ಶಾಲಿನಿ ಅವರ ಸಹೋದರ ತುಮಕೂರಿನಲ್ಲಿರುವ ಚಿರಂಜೀವಿ ಎಂಬವರು ಪ್ರತಿನಿತ್ಯ ಸಹೋದರಿಯರ ಜೊತೆಗೆ ಮಾತನಾಡುತ್ತಿದ್ದರು. ಆಗಸ್ಟ್ 12ರಂದು ಕರೆ ಮಾಡಿದಾಗ ಮನೆಯ ಎಲ್ಲರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು.
ಇದರಿಂದ ಆತಂಕಗೊಂಡ ಅವರು, ಕೂಡಲೇ ತಮ್ಮ ಅಕ್ಕನ ಮನೆಯ ಬಳಿ ಇದ್ದ ಸ್ನೇಹಿತನಿಗೆ ಕರೆ ಮಾಡಿ ಮನೆ ಬಳಿಗೆ ಹೋಗಿ ನೋಡುವಂತೆ ಹೇಳಿದ್ದಾರೆ. ಸ್ನೇಹಿತ ಮನೆಯ ಬಳಿಗೆ ಹೋದ ವೇಳೆ, ಮನೆಯವರೆಲ್ಲರೂ ಕುಟುಂಬ ಸಮೇತರಾಗಿ ಹೊರಗೆ ಹೋಗಿದ್ದಾರೆ ಎಂದು ಮನೆ ಮಾಲಿಕರು ಹೇಳಿದ್ದಾರೆ.
ಆದರೆ, ಮನೆಯವರು ಯಾರು ಕೂಡ ಸಂಪರ್ಕಕ್ಕೆ ಸಿಗದಿದ್ದಾಗ ಚಿರಂಜೀವಿ ಬೆಂಗಳೂರಿಗೆ ಬಂದಿದ್ದು, ಡೂಪ್ಲಿಕೇಟ್ ಕೀ ತೆರೆದು ಮನೆಯೊಳಗೆ ಪ್ರವೇಶಿಸಿದಾಗ ಕಿಟಕಿ ಬಳಿಯಲ್ಲಿ ಡೆತ್ ನೋಟ್ ಬರೆದಿಟ್ಟಿರುವುದು ಪತ್ತೆಯಾಗಿದೆ. “ನಮಗೆ ಜೀವನ ನಡೆಸಲು ಕಷ್ಟವಾಗುತ್ತಿದೆ. ನಮಗೆ ಈ ಜೀವನ ಬೇಡವೇ ಬೇಡ. ದಯಮಾಡಿ ನಮ್ಮನ್ನು ಸಾಯಲು ಬಿಡಿ ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿತ್ತು.
ಈ ವಿಚಾರ ತಿಳಿಯುತ್ತಿದ್ದಂತೆಯೇ ಚಿರಂಜೀವಿ ಬಾಗಲಗುಂಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬಕ್ಕಾಗಿ ಶೋಧ ನಡೆಸುತ್ತಿದ್ದಾರೆ.
ಇನ್ನಷ್ಟು ಸುದ್ದಿಗಳು…
ತನ್ನ ಬಗ್ಗೆ ತಾನೇ ಪುಸ್ತಕ ಬರೆದುಕೊಂಡು ಸ್ವಾತಂತ್ರ್ಯ ಹೋರಾಟಗಾರನಾದ ಸಾರ್ವರ್ಕರ್ | ಶಾಫಿ ಬೆಳ್ಳಾರೆ
ಬೇಲ್ ಮೇಲೆ ಜೈಲಿನಿಂದ ಬಂದಿದ್ದಾತ ಪತ್ನಿಯನ್ನು ಕೊಂದ | ಮೂವರು ಪೊಲೀಸ್ ಅಧಿಕಾರಿಗಳು ಅಮಾನತು
ಅಫ್ಘಾನಿಸ್ತಾನ ಸಂಕಷ್ಟದ ಬೆನ್ನಲ್ಲೇ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ
ಸ್ವಾತಂತ್ರ್ಯ ರಥಕ್ಕೆ ಅಡ್ಡಿ ಪ್ರಕರಣ: ಬಂಧಿತ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು
ಟ್ವಿಟರ್ ಬರ್ಡ್ ಫ್ರೈ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು | ರಾಹುಲ್ ಖಾತೆ ಲಾಕ್ ಗೆ ಆಕ್ರೋಶ
ಕಿಟಕಿಯಲ್ಲಿ ನೇತಾಡುತ್ತಾ ಲಸಿಕೆ ಪಡೆದ ವ್ಯಕ್ತಿ | “ಶಾರ್ಟ್ ಕಟ್ ಲಸಿಕೆ” ವಿಡಿಯೋ ವೈರಲ್