ನ್ಯಾಯಾಧೀಶರನ್ನು ರಸ್ತೆಯಲ್ಲಿಯೇ ಭೀಕರ ಹತ್ಯೆ: ಸಿಸಿ ಕ್ಯಾಮರದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ - Mahanayaka

ನ್ಯಾಯಾಧೀಶರನ್ನು ರಸ್ತೆಯಲ್ಲಿಯೇ ಭೀಕರ ಹತ್ಯೆ: ಸಿಸಿ ಕ್ಯಾಮರದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

adj uttam anand
29/07/2021

ಜಾರ್ಖಂಡ್: ಜಾರ್ಖಂಡ್ ನ ಧನ್ ಬಾದ್ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಅವರು ಜಾಗಿಂಗ್ ಮಾಡುತ್ತಿದ್ದ ವೇಳೆ ಆಟೋವೊಂದು ಅವರಿಗೆ ಡಿಕ್ಕಿಯಾಗಿ ಪರಾರಿಯಾಗಿತ್ತು. ಇದೊಂದು ಆಕಸ್ಮಿಕ ಘಟನೆ ಎಂದು ಹೇಳಲಾಗಿತ್ತು. ಆದರೆ ಇದೀಗ ಇದೊಂದು ವ್ಯವಸ್ಥಿತ ಮರ್ಡರ್ ಎನ್ನುವುದು ಸಿಸಿ ಕ್ಯಾಮರಾ ದೃಶ್ಯಗಳಿಂದ ಬಯಲಾಗಿದೆ.

ಮುಂಜಾನೆ 5 ಗಂಟೆಗೆ ನ್ಯಾಯಾಧೀಶ ಉತ್ತಮ್ ಆನಂದ್ ರಸ್ತೆಯ ಒಂದು ಬದಿಯಿಂದ ಜಾಗಿಂಗ್ ಮಾಡುತ್ತಾ ಹೋಗುತ್ತಿರುತ್ತಾರೆ. ಈ ವೇಳೆ ಹಿಂದಿನಿಂದ ಬಂದ ಟೆಂಪೋವೊಂದು ಉದ್ದೇಶ ಪೂರ್ವಕವಾಗಿಯೇ ಜಡ್ಜ್ ಗೆ ಡಿಕ್ಕಿ ಹೊಡೆದು ವೇಗವಾಗಿ ಮುಂದಕ್ಕೆ  ಸಾಗುತ್ತಿರುವ ದೃಶ್ಯ ಸಿಸಿ ಕ್ಯಾಮರದಲ್ಲಿ  ಸೆರೆಯಾಗಿದೆ.

ಇನ್ನೂ ಘಟನೆಗೆ ಸಂಬಂಧಿಸಿದಂತೆ ಆಟೋ ಚಾಲಕನೋರ್ವನನ್ನು ಗಿರಿಡಿಹ್ ಪೊಲೀಸರು ಬಂಧಿಸಿದ್ದಾರೆ. ಈತನನ್ನು ವಿಚಾರಿಸಿದಾಗ, ಆತನ ಆಟೋವನ್ನು ಕಳವು ಮಾಡಲಾಗಿತ್ತು. ಕಳವು ಮಾಡಿದ ಆಟೋದಿಂದ ಉತ್ತಮ್ ಆನಂದ್ ಅವರನ್ನು ಡಿಕ್ಕಿ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಸದ್ಯದ ಮಾಹಿತಿಯ ಪ್ರಕಾರ ಇದೊಂದು ಪ್ರತಿಕಾರದ ಕೊಲೆಯಾಗಿದ್ದು, ಹೈಪ್ರೊಫೈಲ್ ಕೇಸ್ ವೊಂದರ ವಿಚಾರಣೆ ನಡೆಸಿದ್ದ ಉತ್ತಮ್ ಆನಂದ್ ಅವರು,  ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದ್ದು, ಈ ವೈಶಮ್ಯದಿಂದ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಸಂಬಂಧ ಪೊಲೀಸರು ಇದೀಗ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದಾರೆ.

ಇನ್ನಷ್ಟು ಸುದ್ದಿಗಳು…

ಬಾಲಕಿಗೆ “ಮನೆಯಲ್ಲಿ ಒಬ್ಬನೇ ಇದ್ದೇನೆ ಬರ್ತಿಯಾ” ಎಂದ ಪೊಲೀಸ್ ಕಾನ್ಸ್ ಟೇಬಲ್ ಅರೆಸ್ಟ್

ಸೆಕ್ಸ್ ವಿಡಿಯೋ ತಯಾರಿಸುವುದು ಕೂಡ ಒಂದು ಉದ್ಯೋಗ | ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಅಲಿ

ಬಿಜೆಪಿಗೆ ತಲೆ ನೋವಾದ ಸ್ವಾಮೀಜಿಗಳು | ಈಶ್ವರಪ್ಪರನ್ನು ಡಿಸಿಎಂ ಮಾಡಿ, ಇಲ್ಲವೇ ಪರಿಣಾಮ ಎದುರಿಸಿ ಎಂದು ಬಿಜೆಪಿಗೆ ಬೆದರಿಕೆ

ನಿರ್ಜನ ಪ್ರದೇಶದಲ್ಲಿ ಮಹಿಳೆಯ ಮೇಲೆ ಕಾರಿನಲ್ಲೇ ಅತ್ಯಾಚಾರ | ಬಾಡಿಗೆ ಮನೆ ಮಾಲಿಕನಿಂದ ಕೃತ್ಯ

ಏರ್ಟೆಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ | ನಾಳೆಯಿಂದ ಹೊಸ ಬದಲಾವಣೆ

ಇತ್ತೀಚಿನ ಸುದ್ದಿ