ಪ್ರೀತಿಸಿದವನನ್ನು ವಿಷ ಹಾಕಿ ಕೊಂದವಳಿಗೆ ಮರಣದಂಡನೆ: ಆತ ಕೊನೆ ಉಸಿರಿರುವವರೆಗೂ ಪ್ರೀತಿಸಿದ್ದ! - Mahanayaka

ಪ್ರೀತಿಸಿದವನನ್ನು ವಿಷ ಹಾಕಿ ಕೊಂದವಳಿಗೆ ಮರಣದಂಡನೆ: ಆತ ಕೊನೆ ಉಸಿರಿರುವವರೆಗೂ ಪ್ರೀತಿಸಿದ್ದ!

greshma
20/01/2025

ತಿರುವನಂತಪುರಂ: ಪ್ರಿಯಕರನನ್ನು ವಿಷ ಹಾಕಿ ಕೊಲೆ ಮಾಡಿದ ಕೇರಳದ ಗ್ರೀಷ್ಮಾ ಪ್ರಕರಣದ ವಿಚಾರಣೆ ಪೂರ್ಣಗೊಂಡು ಗ್ರೀಷ್ಮಾ ದೋಷಿ ಎಂದು ನೆಯ್ಯಟ್ಟಿಂಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿತ್ತು. ಇದೀಗ ಇಂದು ಶಿಕ್ಷೆ ಘೋಷಿಸಿದ್ದು, ಗ್ರೀಷ್ಮಾಗೆ ಮರಣದಂಡನೆ ವಿಧಿಸಿದೆ.

ಕೇರಳದ ಶರೋನ್ ರಾಜ್ ಹತ್ಯೆ ಪ್ರಕರಣ ಇಡೀ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. 2022ರಲ್ಲಿ ರೇಡಿಯಾಲಜಿ ವಿದ್ಯಾರ್ಥಿಯಾಗಿದ್ದ ಶರೋನ್ ರಾಜ್ ನನ್ನು ಆಕೆಯ ಪ್ರೇಯಸಿ, ಕಷಾಯದಲ್ಲಿ ವಿಷ ಹಾಕಿ ಹತ್ಯೆ ನಡೆಸಿದ್ದಳು.


ADS

ಈ ಪ್ರಕರಣದಲ್ಲಿ ಸಾಕ್ಷಿ ನಾಶ ಮಾಡಿದ ಆರೋಪದಲ್ಲಿ ಗ್ರೀಷ್ಮಾಳ ಚಿಕ್ಕಪ್ಪ ನಿರ್ಮಲ್ ಕುಮಾರ್ ಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಗ್ರೀಷ್ಮಾಳ ತಾಯಿ ಸಿಂಧುವನ್ನು ನ್ಯಾಯಾಲಯ ಖುಲಾಸೆ ಗೊಳಿಸಿದೆ.

ಪ್ರೀತಿ ಕೊಂದ ಕೊಲೆಗಾತಿ!

ಗ್ರೀಷ್ಮಾಗೆ 2022ರ ಮಾರ್ಚ್ 4ರಂದು ಯೋಧನೊಬ್ಬನೊಂದಿಗೆ ವಿವಾಹ ನಿಶ್ಚಿತಾರ್ಥವಾಗಿತ್ತು. ಇದಾಗಿ ಕೆಲವೇ ತಿಂಗಳ ಅಂತರದಲ್ಲಿ ಶರೋನ್ ಹಾಗೂ ಗ್ರೀಷ್ಮಾ ಹತ್ತಿರವಾಗಿದ್ದರು. ನಂತರ ಇವರಿಬ್ಬರು ಮದುವೆ ಮಾಡಿಕೊಂಡಿದ್ದರು. ಆದರೆ, ಯೋಧನ ಜೊತೆಗೆ ವಿವಾಹ ದಿನ ಹತ್ತಿರ ಬರುತ್ತಿದ್ದಂತೆಯೇ ಶರೋನ್ ಗೆ ಕೈಕೊಡಲು ಗ್ರೀಷ್ಮಾ ಮುಂದಾಗಿದ್ದಾಳೆ. ಆದರೆ ಶರೋನ್ ಗ್ರೀಷ್ಮಾಳನ್ನು ಬಿಡಲು ಸಿದ್ಧನಿರಲಿಲ್ಲ, ಗ್ರೀಷ್ಮಾ ಶರೋನ್ ನನ್ನು ದೂರ ಮಾಡಲು ಎಲ್ಲ ಪ್ರಯತ್ನ ಮಾಡಿದರೂ, ವಿಫಲವಾಯ್ತು. ಕೊನೆಗೆ ಆತನನ್ನು ಕೊಲೆ ಮಾಡಲು ನಿರ್ಧರಿಸಿದ್ದಳು. ಅಕ್ಟೋಬರ್ 14ರಂದು ಶರೋನ್ ರಾಜ್ ನನ್ನು ತನ್ನ ಮನೆಗೆ ಕರೆಸಿಕೊಂಡು ಆರ್ಯುವೇದ ಔಷಧಿ(ಕಷಾಯ)ಯಲ್ಲಿ ವಿಷ ಬೆರೆಸಿ, ಉಪಾಯವಾಗಿ ಶರೋನ್ ಗೆ ಕುಡಿಸಿದ್ದಳು. ಇದಾದ ಬಳಿಕ ಅಸ್ವಸ್ಥಗೊಂಡಿದ್ದ ಶರೋನ್ ಆಸ್ಪತ್ರೆಗೆ ದಾಖಲಾಗಿದ್ದ. ಆತ ಹಂತ ಹಂತವಾಗಿ ನರಳಾಡಿ ನರಳಾಡಿ ಅಕ್ಟೋಬರ್ 25ರಂದು ಮೃತಪಟ್ಟಿದ್ದ.

ಸಾಯುವವರೆಗೂ ಪ್ರೀತಿಸಿದ ಶರೋನ್:

ಗ್ರೀಷ್ಮಾ ತನಗೆ ವಿಷವುಣಿಸಿದ್ದಾಳೆ ಎಂದು ಶರೋನ್ ಗೆ ಗೊತ್ತಿದ್ದರೂ, ಆತ ಆಕೆಯ ಹೆಸರು ಹೇಳಿರಲಿಲ್ಲ. ತನ್ನ ಕೊನೆಯ ಉಸಿರು ಇರುವವರೆಗೂ ಆತ ಆಕೆಯನ್ನು ಪ್ರೀತಿಸುತ್ತಿದ್ದ. ಆಕೆಗೆ ಶಿಕ್ಷೆ ಆಗ ಬಾರದು ಎಂದು ಆತ ಬಯಸ್ಸಿದ್ದ.

ಗ್ರೀಷ್ಮಾ ತನ್ನನ್ನು ಪ್ರೀತಿಸಿದ ವ್ಯಕ್ತಿಗೆ ಮೋಸ ಮಾಡಿದ್ದಾಳೆ. ಇದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದಿಲ್ಲ. ಪೊಲೀಸರು ಈ ಕೊಲೆ ಪ್ರಕರಣವನ್ನು ಅತ್ಯಂತ ಬುದ್ಧಿವಂತಿಕೆಯಿಂದ ತನಿಖೆ ನಡೆಸಿದ್ದಾರೆ ಎಂದು ಕೋರ್ಟ್ ಶ್ಲಾಘಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

 

 

ಇತ್ತೀಚಿನ ಸುದ್ದಿ