ಹಣ ದ್ವಿಗುಣ ಮಾಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ಮೋಸ: ಆರೋಪಿಯ ಬಂಧನ, 45 ಲಕ್ಷ ರೂ, ಲ್ಯಾಪ್ ಟಾಪ್ ವಶ - Mahanayaka

ಹಣ ದ್ವಿಗುಣ ಮಾಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ಮೋಸ: ಆರೋಪಿಯ ಬಂಧನ, 45 ಲಕ್ಷ ರೂ, ಲ್ಯಾಪ್ ಟಾಪ್ ವಶ

arrest
21/07/2023

ಬೆಂಗಳೂರು ನಗರ, ದಕ್ಷಿಣ ವಿಭಾಗ, ಜಯನಗರ ಉಪ ವಿಭಾಗ, ಬನಶಂಕರಿ ಪೊಲೀಸ್ ಠಾಣೆ ಪೊಲೀಸರು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಸಿಕೊಂಡು, ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಆರೋಪಿಯಿಂದ ರೂ.45 ಲಕ್ಷ ನಗದು ಮತ್ತು 2 ಲ್ಯಾಪ್ ಟಾಪ್‌ ಗಳನ್ನು ವಶಪಡಿಸಿಕೊಂಡಿದ್ದಾರೆ.

ಬನಶಂಕರಿ ಪೊಲೀಸರಿಗೆ ಕಳೆದ ಏಪ್ರಿಲ್ 28 ರಂದು ರಾಘವೇಂದ್ರ ಆಚಾರ್ಯ ಎಂಬುವರು ದೂರನ್ನು ನೀಡಿದ್ದು, ದೂರಿನಲ್ಲಿ ಪರಿಚಯದ‌ ವ್ಯಕ್ತಿಯೊಬ್ಬ ತಾನು ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡುತ್ತಿದ್ದು,  ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ 20 ತಿಂಗಳಲ್ಲಿ ಹಣ ದ್ವಿಗುಣ ಮಾಡಿಕೊಡುತ್ತೇನೆಂದು ನಂಬಿಸಿರುತ್ತಾರೆ.

ಇದನ್ನು ನಂಬಿ ಆತನಿಗೆ 2022 ನೇ ಇಸವಿಯಲ್ಲಿ ಒಟ್ಟು 1,07 ಕೋಟಿ ರೂಗಳನ್ನು ನೀಡಿದ್ದು, ಅಲ್ಲದೆ,  ಮನೆಯನ್ನು ಸಹ ಸೆಟ್ ಆಗ್ರೀಮೆಂಟ್ ಮಾಡಿಕೊಂಡು,  ಸ್ವತ್ತಿನ ಮೇಲೆ ಬ್ಯಾಂಕಿನಲ್ಲಿ ಸಾಲ ಪಡೆದುಕೊಳ್ಳಲು ಪ್ರಯತ್ನಿಸಿರುತ್ತಾನೆ. ನಂತರ ಆರೋಪಿಯು ಆತನ ಕಛೇರಿಯನ್ನು ಹಾಗೂ ಮೊಬೈಲ್‌ ನ್ನು ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿರುತ್ತಾನೆ. ಈ ಬಗ್ಗೆ ಮೋಸ ವಂಚನೆ ಪ್ರಕರಣ ತನಿಖೆಯನ್ನು ಮುಂದುವರಿಸಿದ ತನಿಖಾಧಿಕಾರಿಗಳು ಆರೋಪಿಯನ್ನು ಜುಲೈ  1ರಂದು ಚೆನ್ನೈ ಹೊರವಲಯದ ಮನೆಯಲ್ಲಿ ವಶಕ್ಕೆ ತೆಗೆದುಕೊಂಡು ದಸ್ತಗಿರಿ ಮಾಡಿರುತ್ತಾರೆ.


Provided by

ಅಲ್ಲದೇ ಆರೋಪಿಯಿಂದ 2 ಲ್ಯಾಪ್‌ ಟ್ಯಾಪ್‌ ಗಳು ಹಲವಾರು ದಾಖಲಾತಿಗಳು ಮತ್ತು ರೂ.45 ಲಕ್ಷ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಹಾಲಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ.

ಬೆಂಗಳೂರು ನಗರ, ದಕ್ಷಿಣ ವಿಭಾಗದ ಉಪ ಪೊಲೀಸ್‌ ಆಯುಕ್ತ ಪಿ.ಕೃಷ್ಣಕಾಂತ್, ಮತ್ತು ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಕೆ.ವಿ.ಶ್ರೀನಿವಾಸ್  ಮಾರ್ಗದರ್ಶನದಲ್ಲಿ ಬನಶಂಕರಿ ಪೊಲೀಸ್ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್ ಗಿರೀಶ್‌ ನಾಯ್ಕ.ಸಿ ರವರ ನೇತೃತ್ವದ ಸಿಬ್ಬಂದಿಯವರ ತಂಡ ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ