ಡಿಸೆಂಬರ್ 5ರಂದು ಬಹುಜನ ನಾಯಕ ದಾಸಪ್ಪ ಎಡಪದವು ಅವರಿಗೆ ನುಡಿನಮನ
ಮೂಡಬಿದಿರೆ: ಇತ್ತೀಚೆಗೆ ನಿಧನರಾದ ಬಹುಜನ ನಾಯಕ ದಾಸಪ್ಪ ಎಡಪದವು ಅವರಿಗೆ ಬಿ.ಎಸ್.ಪಿ, ಜಿಲ್ಲಾ ಘಟಕದ ವತಿಯಿಂದ ಡಿಸೆಂಬರ್ 5ರಂದು ನುಡಿನಮನ ಹಾಗೂ ಸಂವಿಧಾನ ಸಂರಕ್ಷಣೆಗಾಗಿ ಜೈ ಭೀಮ್ ಜನ ಹಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಬಿ. ಎಸ್. ಪಿ. ರಾಜ್ಯ ಕಾರ್ಯದರ್ಶಿ ಕಾಂತಪ್ಪ ಅಲಂಗಾರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಜನ ಸಮಾಜ ಪಾರ್ಟಿ ದ.ಕ. ಜಿಲ್ಲಾ ಘಟಕದ ವತಿಯಿಂದ ಡಿ.5ರಂದು ಬೆಳಗ್ಗೆ 10:30ಕ್ಕೆ ಸಮಾಜ ಮಂದಿರ ವಾರದ ಸ್ವರ್ಣ ಮಂದಿರದಲ್ಲಿ ಬಹುಜನ ಚಳುವಳಿಯ ನಾಯಕ, ಹಿರಿಯ ಬೌದ್ಧ ಉಪಾಸಕ, ಹಾಗೂ ಬಿ.ಎಸ್.ಪಿ. ದ.ಕ. ಜಿಲ್ಲಾ ಅಧ್ಯಕ್ಷರಾದ ದಿವಂಗತ ದಾಸಪ್ಪ ಎಡವದವು ಅವರಿಗೆ ನುಡಿನಮನ ಹಾಗೂ ಸಂವಿಧಾನ ಸಂರಕ್ಷಣೆಗಾಗಿ ಜನಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಬಿಎಸ್ ಪಿ ಮುಖಂಡರು
ನ. 19ರಂದು ದಾಸಪ್ಪ ಎಡಪದವು ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರು ಬಾಬಾ ಸಾಹೇಬ್ ಅಂಬೇಡ್ಕರವರ ಅನುಯಾಯಿ ಆಗಿದ್ದು, ಬಹುಜನ ಚಳುವಳಿಯಲ್ಲಿ ಪ್ರಮಾಣಿಕವಾಗಿ ದುಡಿದು ತನ್ನ ಸರ್ವಸ್ವವನ್ನು ಬಹುಜನ ಸಮಾಜಕ್ಕೆ ಧಾರೆಯೆರೆದ ಶ್ರೀಮಂತ ನಾಯಕ, ತನ್ನ ಅಂತಿಮ ದಿನದವರೆಗೂ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಕನಸನ್ನು ನನಸು ಮಾಡಲು ತನ್ನ ಜೀವನವನ್ನೇ ಮುಡಿಪಾಗಿಟ್ಟ ನಾಯಕ, ಇವರ ಅಗಲಿಕೆಯು ಇಡೀ ಬಹುಜನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ, ಅಂದು ಡಿ, 5ರಂದು ದಾಸಪ್ಪ ಎಡಪದವುರವರ ತ್ಯಾಗ ಮತ್ತು ಹೋರಾಟದ ಬದುಕನ್ನು ನೆನಪಿಸಿ ಅವರಿಗೆ ನುಡಿನಮನ ಸಲ್ಲಿಸಲಾಗುವುದು ಎಂದು ಹೇಳಿದರು.
ದಾಸಪ್ಪ ಎಡಪದವು
ಬಿ ಎಸ್ ಪಿ ಜಿಲ್ಲಾಧ್ಯಕ್ಷ ದೇವಪ್ಪ ಬೋದ್ ಮಾತನಾಡಿ, ಕಾರ್ಯಕ್ರಮದಲ್ಲಿ ಬಿಎಸ್ಪಿ ಪಂಚರಾಜ್ಯ ಸಂಯೋಜಕ ನಿತಿನ್ ಸಿಂಗ್, ರಾಜ್ಯ ಸಂಯೋಜಕರಾದ ದಿನೇಶ್ ಗೌತಂ, ಎಂ. ಗೋಪೀನಾಥ್, ರಾಜ್ಯಾಧ್ಯಕ್ಷ ಡಾ.ಎಂ.ಕೃಷ್ಣ ಮೂರ್ತಿ, ಉಪಾಧ್ಯಕ್ಷ ಕೆ.ಬಿ.ವಾಸು, ಪ್ರ. ಕಾರ್ಯದರ್ಶಿ ಮುನಿಯಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೊಷ್ಠಿಯಲ್ಲಿ ಬಿ.ಎಸ್. ಪಿ. ದ.ಕ. ಜಿಲ್ಲಾ ಸಂಯೋಜಕರಾದ ಗೋಪಾಲ್ ಮುತ್ತೂರು, ಖಜಾಂಚಿ ವಿಮಲಾ ಕೆ., ಕಾರ್ಯಕಾರಿ ಸಮಿತಿ ಸದಸ್ಯರಾದ ಪದ್ಮನಾಭ ಪೇಜಾವರ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka