ಸೆಪ್ಟೆಂಬರ್ 30 ರೊಳಗೆ ಆಸ್ತಿ ಘೋಷಿಸಿ, ಇಲ್ಲದಿದ್ರೆ ಸಂಬಳ ಕೊಡಲ್ಲ: ಸಿಬ್ಬಂದಿಗೆ ಯುಪಿ ಸರ್ಕಾರ ಖಡಕ್ ಆದೇಶ
ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರವು ತನ್ನ ಉದ್ಯೋಗಿಗಳಿಗೆ ತಿಂಗಳ ಅಂತ್ಯದ ವೇಳೆಗೆ ತಮ್ಮ ಚರ ಮತ್ತು ಸ್ಥಿರ ಆಸ್ತಿಗಳನ್ನು ಬಹಿರಂಗಪಡಿಸುವಂತೆ ಆದೇಶಿಸಿದೆ. ಇಲ್ಲದಿದ್ದರೆ ಅವರಿಗೆ ಸಂಬಳ ಸಿಗುವುದಿಲ್ಲ ಎಂದು ಕೂಡಾ ಎಚ್ಚರಿಕೆ ನೀಡಿದೆ.
ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ಹೊರಡಿಸಿದ ಈ ಆದೇಶದಲ್ಲಿ ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಇಲಾಖೆಗಳ ಮುಖ್ಯಸ್ಥರು ತಮ್ಮ ಆಸ್ತಿ ವಿವರಗಳನ್ನು ಸೆಪ್ಟೆಂಬರ್ 30 ರೊಳಗೆ ಮಾನವ ಸಂಪದ ಪೋರ್ಟಲ್’ ನಲ್ಲಿ ಘೋಷಿಸಬೇಕು ಎಂದಿದೆ.
ಈ ಆದೇಶವನ್ನು ಪಾಲಿಸುವ ನೌಕರರ ಸಕಾಲಿಕ ಪರಿಶೀಲನೆ ನಡೆಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರವು ಡ್ರಾಯಿಂಗ್ ಮತ್ತು ಡಿಸ್ಟ್ರಿಬ್ಯೂಸಿಂಗ್ ಅಧಿಕಾರಿಗೆ (ಡಿಡಿಒ) ವಹಿಸಿದೆ.
ಪೋರ್ಟಲ್ ನಲ್ಲಿ ತಮ್ಮ ಆಸ್ತಿಯ ವಿವರಗಳನ್ನು ಒದಗಿಸುವ ಉದ್ಯೋಗಿಗಳಿಗೆ ಮಾತ್ರ ಅವರ ಸೆಪ್ಟೆಂಬರ್ ವೇತನವನ್ನು ನೀಡಲಾಗುವುದು.
ಮೂಲಗಳ ಪ್ರಕಾರ, ಶೇಕಡಾ 90 ರಷ್ಟು ರಾಜ್ಯ ಸರ್ಕಾರಿ ನೌಕರರು ತಮ್ಮ ಆಸ್ತಿಯ ವಿವರಗಳನ್ನು ನೀಡಿದ್ದಾರೆ. ಇದರರ್ಥ ಒಟ್ಟು 8.44 ಲಕ್ಷ ಉದ್ಯೋಗಿಗಳಲ್ಲಿ 7.19 ಲಕ್ಷ ಜನರು ತಮ್ಮ ಆಸ್ತಿಯ ಮೂಲವನ್ನು ಪೋರ್ಟಲ್‌ನಲ್ಲಿ ಉಲ್ಲೇಖಿಸಿದ್ದಾರೆ.
ಈ ಮೊದಲು, ನೌಕರರು ತಮ್ಮ ಆಸ್ತಿ ವಿವರಗಳನ್ನು ಆಗಸ್ಟ್ 31 ರೊಳಗೆ ಬಹಿರಂಗಪಡಿಸಬೇಕಾಗಿತ್ತು. ಆದರೆ ಕೆಲವು ನೌಕರರು ಹೆಚ್ಚಿನ ಸಮಯವನ್ನು ಕೋರಿದ ನಂತರ ರಾಜ್ಯ ಸರ್ಕಾರ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth