ದೆಹಲಿ ಹಿಂಸಾಚಾರ | ನಟ ದೀಪ್ ಸಿಧು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ - Mahanayaka
10:36 AM Thursday 12 - December 2024

ದೆಹಲಿ ಹಿಂಸಾಚಾರ | ನಟ ದೀಪ್ ಸಿಧು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ

09/02/2021

ನವದೆಹಲಿ: ದೆಹಲಿಯಲ್ಲಿ ಜನವರಿ  26ರಂದು ನಡೆದ ರೈತರ ಟ್ರಾಕ್ಟರ್ ಪರೇಡ್ ವೇಳೆ ನಡೆದ ಹಿಂಸಾಚಾರ ಹಾಗೂ ಕೆಂಪು ಕೋಟೆಯ ಮೇಲೆ ಧ್ವಜ ರೈತರ ಬಾವುಟ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟ ದೀಪ್ ಸಿಧು ಅವರನ್ನು ದೆಹಲಿಯ ತೀಸ್ ಹಜಾರಿ ಕೋರ್ಟ್ 7 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ವಿಶೇಷ ಪೊಲೀಸ್ ತಂಡವು ದೀಪ್ ಸಿಧು ಅವರನ್ನು 10 ದಿನಗಳ ಕಾಲ ಕಸ್ಟಡಿಗೆ ಒಪ್ಪಿಸುವಂತೆ  ಕೇಳಿತ್ತು. ಆದರೆ, ನ್ಯಾಯಾಲಯವು 7 ದಿನಗಳ ಕಾಲ ಕಸ್ಟಡಿಗೆ ನೀಡಿದೆ.  ಇಂದು ಬೆಳಗ್ಗೆ ಚಂಡೀಗಢ ಹಾಗೂ ಅಂಬಾಲಾ ನಡುವಿನ ಝಾರಕ್ ಪುರ ಪ್ರದೇಶದಲ್ಲಿ ದೀಪ್ ಸಿಧು ಅವರನ್ನು ಬಂಧಿಸಲಾಗಿತ್ತು.

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ರೈತರ ಟ್ರ್ಯಾಕ್ಟರ್ ಪರೇಡ್ ಸಂದರ್ಭದಲ್ಲಿ ಹಿಂಸಾಚಾರ ನಡೆದಿತ್ತು. ರೈತರು ಹಿಂಸಾಚಾರ ನಡೆಸಿದ್ದಾರೆ ಎಂದು ಆಡಳಿಯ ಪಕ್ಷ ಬಿಜೆಪಿಯ ನಾಯಕರು ಹೇಳಿದರೆ, ಪ್ರತಿಭಟನೆಯೊಳಗೆ ಬಿಜೆಪಿ ಕಾರ್ಯಕರ್ತರು ಸಿಖ್ಖರ ವೇಷ ಧರಿಸಿ ಬಂದು ಹಿಂಸಾಚಾರ ನಡೆಸಿದ್ದಾರೆ ಎಂದು ರೈತ ಮುಖಂಡರು ಹೇಳುತ್ತಿದ್ದಾರೆ.

ಇತ್ತೀಚಿನ ಸುದ್ದಿ