ದೀಪಾವಳಿ: ಕೇದಗೆ ಗಿಡ, ಲಕ್ಕೆಕುಡಿ ಇಟ್ಟು ಹಬ್ಬ ಆಚರಣೆ
ಕೊಟ್ಟಿಗೆಹಾರ: ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಬಣಕಲ್ ಕೊಟ್ಟಿಗೆಹಾರ ಸುತ್ತಮುತ್ತ ಮನೆ, ಕೊಟ್ಟಿಗೆ, ದೇವಸ್ಥಾನ, ಗದ್ದೆ, ತೋಟಗಳಲ್ಲಿ ಕೇದಗೆ ಗಿಡ, ಲಕ್ಕೆ ಕುಡಿಯನ್ನು ಇಡಲಾಯಿತು.
ಗ್ರಾಮೀಣ ಭಾಗದಲ್ಲಿ ಕೇದಗೆ ಗಿಡವನ್ನು ಕತ್ತರಿಸಿ ತಂದು ಮನೆ, ತೋಟ, ಗದ್ದೆ, ಬಾವಿ, ಕೊಟ್ಟಿಗೆ ಮುಂತಾದ ಕಡೆಗಳಲ್ಲಿ ಇಡುವ ಸಂಪ್ರದಾಯವಿದ್ದು ಸಂಜೆ ಸಮಯದಲ್ಲಿ ತೋಟ, ಗದ್ದೆಗಳಲ್ಲಿ ದೀಪ ಬೆಳಗಿ ಹಚ್ಚಲಾಯಿತು.
ದೀಪಾವಳಿ ಅಂಗವಾಗಿ ಬಣಕಲ್ ಕೊಟ್ಟಿಗೆಹಾರ ಭಾಗದಲ್ಲಿ ಪಟಾಕಿ ವ್ಯಾಪಾರವೂ ಜೋರಾಗಿದ್ದು ಮಾರುಕಟ್ಟೆಗೆ ಬಂದ ತರಾವರಿ ಪಟಾಕಿಗಳನ್ನು ಗ್ರಾಹಕರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದ ದೃಶ್ಯ ಕಂಡು ಬಂತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka