ಸಿಎಂ ಸ್ಥಾನ ಆಕಾಂಕ್ಷಿಯಾಗಿದ್ದ ಸಿ.ಟಿ.ರವಿಗೆ ಸೋಲು: 4 ಬಾರಿ ಗೆದ್ದಿದ್ದ ಸಿ.ಟಿ.ರವಿಗೆ ಅನಿರೀಕ್ಷಿತ ಸೋಲು
ಚಿಕ್ಕಮಗಳೂರು: ಬಿಜೆಪಿ ಸಿಎಂ ಸ್ಥಾನ ಆಕಾಂಕ್ಷಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೋಲಿನ ರುಚಿ ಕಂಡಿದ್ದಾರೆ. ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದ ಸಿ.ಟಿ.ರವಿಗೆ ಅನಿರೀಕ್ಷಿತ ಸೋಲು ಎದುರಾಗಿದ್ದು, ಪಕ್ಷ ಕಾರ್ಯಕರ್ತರು, ಮುಖಂಡರಿಗೆ ಶಾಕ್ ಆಗಿದೆ.
ಕಾಂಗ್ರೆಸ್ ನ ಹೆಚ್.ಡಿ.ತಿಮ್ಮಯ್ಯ ಅವರು 64552 ಮತಗಳನ್ನು ಪಡೆದು ಚಿಕ್ಕಮಗಳೂರಿನಲ್ಲಿ ಗೆಲುವು ಸಾಧಿಸಿದ್ದಾರೆ. ಸಿ.ಟಿ.ರವಿ 55678 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ.
ಬಿಜೆಪಿ ಗೆದ್ದಿದ್ದರೆ, ಸಿಎಂ ರೇಸ್ ನಲ್ಲಿ ಸಿ.ಟಿ.ರವಿ ಕೂಡ ಇರುತ್ತಿದ್ದರು. ಸಿ.ಟಿ.ರವಿ ಸಿಎಂ ಆಗಲಿ ಎಂದು ಅವರ ಬೆಂಬಲಿಗರು ಯಾತ್ರೆ, ಕಾಲ್ನಡಿಗೆಗಳನ್ನು ಕೂಡ ಮಾಡಿದ್ದರು. ಸಿಎಂ ರೇಸ್ ನಲ್ಲಿದ್ದ ಕಾರಣ ಪಕ್ಷದೊಳಗಿ ಆಂತರಿಕ ಸ್ಪರ್ಧೆ ಸಿ.ಟಿ.ರವಿ ಸೋಲಿಗೆ ಕಾರಣವಾಯ್ತಾ ಅನ್ನೋ ಅನುಮಾನಗಳು ಕೂಡ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw