ದೇಶ ರಕ್ಷಣೆಯೇ ನಮ್ಮ ಆದ್ಯ ಕರ್ತವ್ಯ : ಯದಲ್ಲಾಪುರೆ - Mahanayaka
11:59 AM Friday 20 - September 2024

ದೇಶ ರಕ್ಷಣೆಯೇ ನಮ್ಮ ಆದ್ಯ ಕರ್ತವ್ಯ : ಯದಲ್ಲಾಪುರೆ

vhp
03/09/2024

ಔರಾದ :  ವಿಶ್ವ ಹಿಂದೂ ಪರಿಷತ್ ಔರಾದ ವತಿಯಿಂದ ಪರಿಷತ್ತಿನ 60ರ ಸಂಭ್ರಮ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಷಷ್ಟಿಪೂರ್ತಿ ಕಾರ್ಯಕ್ರಮವನ್ನು ಪಟ್ಟಣದ ದತ್ತಮಂದಿರದಲ್ಲಿ ಭಾರತ ಮಾತೆ ಹಾಗೂ ಶ್ರೀ ಕೃಷ್ಣನ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಆಚರಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಬಸವರಾಜ ಯದಲ್ಲಾಪುರೆ ಕಾರ್ಯಕ್ರಮ ಉದ್ದೇಶಿಸಿ ಬೌದ್ಧಿಕ ಮಾತನಾಡಿ, ವಿಶ್ವ ಹಿಂದೂ ಪರಿಷತ್ ವತಿಯಿಂದ ಜಿಲ್ಲಾದ್ಯಂತ ಪರಿಷತ್ ಸ್ಥಾಪನೆ 60 ರ ಸಂಭ್ರಮ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯುತ್ತಿದೆ. ಹಿಂದೂ ಸಮಾಜವನ್ನು ಸಂಘಟಿಸುವುದು ಹಿಂದೂ ಧರ್ಮದ ಸೇವೆ ಮತ್ತು ರಕ್ಷಣೆ ಮಾಡುವುದು ಹಿಂದೂ ದೇವಾಲಯಗಳನ್ನು ಕಟ್ಟಿಸುವುದು ಮತ್ತು ಗೋ ಹತ್ಯ ಧಾರ್ಮಿಕ ಮತಾಂತರದ ವಿಷಯಗಳೊಂದಿಗೆ ಸಂಘ ಸ್ಥಾಪಿಸಲಾಗಿದೆ. ಹಿಂದೂ ಧರ್ಮದವರಾದ ನಾವು ದೇಶಕ್ಕಾಗಿ ದುಡಿಯಬೇಕು ದೇಶ ರಕ್ಷಣೆಯೆ ನಮ್ಮ ಆದ್ಯ ಕರ್ತವ್ಯ ಎಂದು ನುಡಿದರು.

ಅದೇ ರೀತಿ ಹಿರಿಯರಾದ ಕಲ್ಲಪ್ಪ ದೇಶಮುಖ ಮಾತನಾಡಿ, ದೇಶ ರಕ್ಷಣೆಗೆ ನಾವು ಸದಾ ಸಿದ್ಧ ಇಂದಿನ ಯುವಕರು ಹಿಂದೂ ರಾಷ್ಟ್ರ ಹಾಗೂ ಹಿಂದುತ್ವ ಉಳಿಸುವಲ್ಲಿ ಮುಂದಾಗಬೇಕು. ಅವಾಗ ಮಾತ್ರ ಭಾರತ ದೇಶ ವಿಶ್ವಗುರು ಆಗಲಿಕ್ಕೆ ಸಾಧ್ಯ. ನಾವು ಮತ್ತು ನಮ್ಮಲ್ಲಿ ಅನೇಕ ನಿವೃತ್ತ ಶಿಕ್ಷಕರು ದೇಶದ ರಕ್ಷಣೆಗೆ ಕೈಜೋಡಿಸುತ್ತೆವೆ ಹಿಂದು ರಾಷ್ಟ ಪ್ರಬಲ ರಾಷ್ಟವಾಗಬೇಕು ಎಂದು ನುಡಿದರು.


Provided by

ಈ ಸಂದರ್ಭದಲ್ಲಿ ದತ್ತ ಸಾಯಿ ಶನೇಶ್ವರ ದೇವಸ್ಥಾನದ ಅರ್ಚಕರಾದ ಉಮಾಕಾಂತ ಸ್ವಾಮಿ, ಬಜರಂಗದ ಜಿಲ್ಲಾ ಸಂಯೋಜಕರಾದ ಭೀಮಣ್ಣ ಸೊರಳ್ಳಿ, ಗುರುನಾಥ್ ವಟಗೆ, ಬಸವರಾಜ್ ಹಳ್ಳೆ, ವಿಶ್ವ ಹಿಂದು ಪರಿಷತ್ ಸಹ ಕಾರ್ಯದರ್ಶಿ ಅಂಬಾದಾಸ ನಳಗೆ ನಿರೂಪಿಸಿದರು, ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ರಾಜಕುಮಾರ ನಾಯಕ್ ಸ್ವಾಗತಿಸಿದರು, ಬಜರಂಗದಳ ಸಂಯೋಜಕ ಸೋನು ರಾಥೋಡ್, ಆನಂದ ದ್ಯಾಡೆ ಅನೇಕರು ಉಪಸ್ಥಿತರಿದ್ದರು.

ವರದಿ: ರವಿಕುಮಾರ ಶಿಂದೆ


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ