ದೇಹ ಅಂಟಿಕೊಂಡಿರುವ ಸ್ಥಿತಿಯಲ್ಲಿ ಮಗು ಜನನ! - Mahanayaka
4:05 AM Thursday 21 - November 2024

ದೇಹ ಅಂಟಿಕೊಂಡಿರುವ ಸ್ಥಿತಿಯಲ್ಲಿ ಮಗು ಜನನ!

sayamy
11/04/2021

ಕೇಂದ್ರಪಾಡ: ಮಹಿಳೆಯೋರ್ವರು ಸಯಾಮಿ, ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಘಟನೆ ಒಡಿಶಾದ ಕೇಂದ್ರಪಾಡ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದು, ಕಾಣಿ ಗ್ರಾಮದ ಉಮಕಾಂತ್, ಅಂಬಿಕಾ ದಂಪತಿಗೆ ಈ ಮಗು ಜನನವಾಗಿದೆ.

ಈ ಮಕ್ಕಳಿಗೆ ನಾಲ್ಕು ಕಣ್ಣುಗಳು ಮತ್ತು ನಾಲ್ಕು ಕಿವಿಗಳಿರುವ ಹಾಗೂ ಒಂದು ಮಗುವಿನ ಬೆನ್ನಿನಲ್ಲಿ ಒಂದು ಕೈ ಇದೆ.  ಇಂತಹ ಜನನ ಬಹಳ ಅಪರೂಪವಾಗಿದೆ. ಸದ್ಯ ಈ ಮಕ್ಕಳನ್ನು ತೀವ್ರ ನಿಗಾವಹಿಸಿ ವೈದ್ಯರ ತಂಡ ಕಾಳಜಿವಹಿಸುತ್ತಿದೆ.

ಈ ಥರದ ಮಕ್ಕಳು ತಾಯಿ ಗರ್ಭದಿಂದಲೇ ಶರೀರದ ಭಾಗಗಳನ್ನು ಪರಸ್ಪರ ಜೋಡಿಸಿಕೊಂಡು ಹುಟ್ಟುತ್ತವೆ. ಈ ಮಕ್ಕಳ ದೇಹ ಒಂದಕ್ಕೊಂದು ಅಂಟಿಕೊಂಡಿರುತ್ತವೆ. ಇಂತಹ ಮಕ್ಕಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಬೇರ್ಪಡಿಸಬಹುದು.

ಇತ್ತೀಚಿನ ಸುದ್ದಿ