ದೆಹಲಿಯಲ್ಲಿ ಭಾರೀ ಅಗ್ನಿ ಅವಘಡ: 60 ಗುಡಿಸಲು ಭಸ್ಮ, 7 ಮಂದಿ ಸಾವು
ನವದೆಹಲಿ: ದೆಹಲಿಯ ಗೋಕುಲಪುರಿಯ ಪಿಎಸ್ ಪ್ರದೇಶದಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ 60 ಗುಡಿಸಲು ಭಸ್ಮವಾಗಿದ್ದು, 7 ಮಂದಿ ಸಾವನ್ನಪ್ಪಿದ ಘಟನೆ ತಡರಾತ್ರಿ 1 ಗಂಟೆ ಸುಮಾರಿಗೆ ನಡೆದಿದೆ.
ದೆಹಲಿ ಅಗ್ನಿಶಾಮಕ ದಳದ ಮಾಹಿತಿ ಪ್ರಕಾರ, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಅಗ್ನಿಶಾಮಕ ಇಲಾಖೆಯಿಂದ ದುರಂತದಲ್ಲಿ ಸಾವನ್ನಪ್ಪಿದ್ದ 7 ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿಸಿದೆ.
ಈ ಬಗ್ಗೆ ಈಶಾನ್ಯ ದೆಹಲಿ ಹೆಚ್ಚುವರಿ ಡಿಸಿಪಿ ಮಾತನಾಡಿ, ಘಟನೆ ನಡೆದಾಕ್ಷಣ ನಾವು ಕಾರ್ಯಪ್ರವೃತ್ತರಾಗಿದ್ದು, ಸ್ಥಳಕ್ಕೆ ತಲುಪಿದ್ದೆವು. ಜೊತೆಗೆ ಅಗ್ನಿ ಶಾಮಕದಳದವರನ್ನು ಸಂಪರ್ಕಿಸಿದ್ದೇವೆ. ಅವರು ಕೂಡ ಉತ್ತಮಾಗಿ ಸ್ಪಂದನೆ ನೀಡಿದ್ದಾರೆ. ಬೆಂಕಿಯನ್ನು ಸುಮಾರು 4 ಗಂಟೆ ವೇಳೆಗೆ ನಂದಿಸಿದ್ದೇವೆ. ಆದರೆ ಅಷ್ಟರಲ್ಲಾಗಲೇ 30 ಗುಡಿಸಲು ಸುಟ್ಟುಹೋಗಿದ್ದು, 7 ಮಂದಿ ಮೃತರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಘಟನೆ ಕುರಿತು ಮಾಹಿತಿ ಕಲೆಹಾಕಿದ ಬಳಿಕ ಸ್ಥಳಕ್ಕೆ 13 ಅಗ್ನಿಶಾಮಕ ವಾಹನಗಳು ಧಾವಿಸಿವೆ. ಅಗ್ನಿ ಅವಘಡಕ್ಕೆ ಕಾರಣವೇನು ಎಂಬುದನ್ನು ತನಿಖೆ ನಡೆಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಭೀಕರ ರಸ್ತೆ ಅಪಘಾತ: ಕಾರು ಚಾಲಕ ಸೇರಿ ಐದು ಮಂದಿ ಸ್ಥಳದಲ್ಲೇ ಸಾವು
ರಷ್ಯಾ ಸೇನೆಯಿಂದ ಉಕ್ರೇನ್ ಮೇಯರ್ ಕಿಡ್ನಾಪ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ
ತಾಯಿ, ಮಗನನ್ನು ಒಂದಾಗಿಸಿದ ಆಧಾರ್ ಕಾರ್ಡ್
ಪಂಚರಾಜ್ಯ ಚುನಾವಣೆ: ಇವಿಎಂ ಹ್ಯಾಕ್ ಆಗಿರಬಹುದು; ಡಾ.ಜಿ.ಪರಮೇಶ್ವರ್
ಪತಿಯನ್ನೇ ಕೊಲೆಗೈದ ಮಹಿಳಾ ಮೋರ್ಚಾ ಅಧ್ಯಕ್ಷೆ