ಅಮಾನುಷ: ಬಾಲ ವಿದ್ಯಾಲಯದಲ್ಲೇ ಮುಸ್ಲಿಂ ಮತ್ತು ದಲಿತ ವಿದ್ಯಾರ್ಥಿಗಳ ಮೇಲೆ ತೀವ್ರ ಜನಾಂಗೀಯ ಆಕ್ರಮಣ
![](https://www.mahanayaka.in/wp-content/uploads/2024/11/79f82d8a9e4916fa1e1978a2c76c40bb2f039376e354172dc9e3c877acf1890b.0-1024x576.webp)
ಪಶ್ಚಿಮ ದೆಹಲಿಯ ನಂದ್ ನಗರಿಯ ಸರ್ವೋದಯ ಬಾಲ ವಿದ್ಯಾಲಯದಲ್ಲಿ ಮುಸ್ಲಿಂ ಮತ್ತು ದಲಿತ ವಿದ್ಯಾರ್ಥಿಗಳ ಮೇಲೆ ತೀವ್ರ ಜನಾಂಗೀಯ ಆಕ್ರಮಣಗಳು ನಡೆಯುತ್ತಿವೆ ಎಂದು ವರದಿಯಾಗಿದೆ. ದೆಹಲಿಯ ನ್ಯಾಯವಾದಿ ಮತ್ತು ಶೈಕ್ಷಣಿಕ ಆಕ್ಟಿವಿಸ್ಟ್ ಆಗಿರುವ ಅಶೋಕ್ ಅಗರ್ವಾಲ್ ಅವರು ಈ ಕುರಿತಂತೆ ನವಂಬರ್ 13ರಂದು ದೆಹಲಿ ಮುಖ್ಯಮಂತ್ರಿ ಅತಿಷಿ ಅವರಲ್ಲಿ ಈ ಬಗ್ಗೆ ದೂರಿಕೊಂಡಿದ್ದಾರೆ.
ಮುಸ್ಲಿಂ ಮತ್ತು ದಲಿತ ವಿದ್ಯಾರ್ಥಿಗಳನ್ನು ಬಾತ್ರೂಮಿಗೆ ಕೊಂಡು ಹೋಗಿ ಅವರ ಬಟ್ಟೆಯನ್ನು ಕಳಚಿ ಕ್ರೂರವಾಗಿ ಥಳಿಸಿದ್ದಲ್ಲದೆ ಜೈ ಶ್ರೀರಾಮ್ ಎಂದು ಅವರಿಂದ ಕೂಗಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಹೀಗೆ ಕ್ರೌರ್ಯಕ್ಕೆ ಒಳಗಾದ ಮಕ್ಕಳು ಆತ್ಮಹತ್ಯೆಯವರೆಗೆ ಆಲೋಚಿಸಿದ್ದಾರೆ ಎಂದು ಕೂಡ ಅವರು ಹೇಳಿದ್ದಾರೆ. ದ ವಯರ್ ಅಂತರ್ಜಾಲ ಪತ್ರಿಕೆಯು ಈ ಕುರಿತಂತೆ ವಿಸ್ತೃತ ವರದಿ ಮಾಡಿದೆ.
ಅಧ್ಯಾಪಕರಾದ ಆದರ್ಶ್ ವರ್ಮಾ, ವಿಕಾಸ್ ಕುಮಾರ್ ಮುಂತಾದವರು ಸೇರಿ ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಈ ಕ್ರೌರ್ಯ ಎಸಗಿದ್ದಾರೆ ಮತ್ತು ಅವರಲ್ಲಿ ಜೈ ಶ್ರೀರಾಮ್ ಎಂದು ಕೂಗಿಸಿದ್ದಾರೆ ಎಂದು ಅಗರ್ವಾಲ್ ಹೇಳಿದ್ದಾರೆ. ಹಲವು ವಿದ್ಯಾರ್ಥಿಗಳು ಇಂತಹ ಆರೋಪದೊಂದಿಗೆ ಮುಂದೆ ಬಂದ ಹಿನ್ನೆಲೆಯಲ್ಲಿ ಅಗರ್ವಾಲ್ ಅವರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿದ್ದಾರೆ. ಅಲ್ಲದೆ ದೆಹಲಿ ಗವರ್ನರ್ ಮತ್ತು ದೆಹಲಿಯ ಶಿಕ್ಷಣ ಸಚಿವರಿಗೂ ಈ ಕುರಿತಂತೆ ಪತ್ರ ಬರೆದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj