ಮಾನನಷ್ಟ ಮೊಕದ್ದಮೆ: ಮೇಜರ್ ಜನರಲ್ ಅಹ್ಲುವಾಲಿಯಾಗೆ 2 ಕೋಟಿ ಪರಿಹಾರ ನೀಡುವಂತೆ ತೆಹಲ್ಕಾ, ತರುಣ್ ತೇಜ್ ಪಾಲ್ ಗೆ ದಿಲ್ಲಿ ಹೈಕೋರ್ಟ್ ಆದೇಶ - Mahanayaka
6:02 PM Friday 20 - September 2024

ಮಾನನಷ್ಟ ಮೊಕದ್ದಮೆ: ಮೇಜರ್ ಜನರಲ್ ಅಹ್ಲುವಾಲಿಯಾಗೆ 2 ಕೋಟಿ ಪರಿಹಾರ ನೀಡುವಂತೆ ತೆಹಲ್ಕಾ, ತರುಣ್ ತೇಜ್ ಪಾಲ್ ಗೆ ದಿಲ್ಲಿ ಹೈಕೋರ್ಟ್ ಆದೇಶ

aluhaval
22/07/2023

ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಮೇಜರ್ ಜನರಲ್ ಎಂಎಸ್ ಅಹ್ಲುವಾಲಿಯಾ ಅವರಿಗೆ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಪತ್ರಕರ್ತರಾದ ತರುಣ್ ತೇಜ್‌ಪಾಲ್, ಅನಿರುದ್ಧ್ ಬೆಹ್ಲ್, ಮ್ಯಾಥ್ಯೂ ಸ್ಯಾಮ್ಯುಯೆಲ್ ಮತ್ತು ತೆಹೆಲ್ಕಾ ಡಾಟ್ ಕಾಮ್‌ಗೆ ದೆಹಲಿ ಹೈಕೋರ್ಟ್ ಆದೇಶಿಸಿದೆ.
2001ರಲ್ಲಿ ತೆಹಲ್ಕಾವು ಕುಟುಕು ಕಾರ್ಯಾಚರಣೆ ನಡೆದಿತ್ತು.

ಈ ವೇಳೆ ಅಹ್ಲುವಾಲಿಯಾ ರಕ್ಷಣಾ ವ್ಯವಹಾರಗಳಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿತ್ತು. ಭ್ರಷ್ಟಾಚಾರದ ಗಂಭೀರ ಆರೋಪಗಳಿಂದ ಸಾರ್ವಜನಿಕರ ದೃಷ್ಟಿಯಲ್ಲಿ ತನ್ನ ಘನತೆ ಕಳೆದುಕೊಂಡಿರುವುದು ಮಾತ್ರವಲ್ಲದೇ ಅವರ ಚಾರಿತ್ರ್ಯಕ್ಕೂ ಕಳಂಕ ಉಂಟಾಗಿದೆ. ದೂರುದಾರರ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಹೇಳಿ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ಪೀಠ ಈ ಆದೇಶ ನೀಡಿದೆ.

ಮೇಜರ್ ಜನರಲ್ ಎಂಎಸ್ ಅಹ್ಲುವಾಲಿಯಾ ಅವರು ಸಲ್ಲಿಸಿದ್ದ ಮೊಕದ್ದಮೆಯನ್ನು ಪುರಸ್ಕರಿಸಿದ್ದ ದೆಹಲಿ ಹೈಕೋರ್ಟ್ ನ ನ್ಯಾಯಮೂರ್ತಿ ನೀನಾ ಬನ್ಸಲ್ ಕೃಷ್ಣ ಅವರು, ಭಾರತೀಯ ಸೇನಾ ಅಧಿಕಾರಿಗೆ ಮಾನಹಾನಿ ಮಾಡಿದ್ದಕ್ಕಾಗಿ ತರುಣ್ ತೇಜ್‌ಪಾಲ್ ಮತ್ತು ಇಬ್ಬರು ಪತ್ರಕರ್ತರಾದ ಅನಿರುದ್ಧ್ ಬೆಹ್ಲ್ ಮತ್ತು ಮ್ಯಾಥ್ಯೂ ಸ್ಯಾಮ್ಯುಯೆಲ್ ಅವರು 2 ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕೆಂದು ಆದೇಶಿಸಿದೆ.


Provided by

ಈ ಮೊತ್ತವನ್ನು ಸುದ್ದಿ ಪೋರ್ಟಲ್ ತೆಹೆಲ್ಕಾ.ಕಾಮ್, ಅದರ ಮಾಲೀಕ ಕಂಪನಿ ಬಫಲೋ ಕಮ್ಯುನಿಕೇಷನ್ಸ್, ಅದರ ಮಾಲೀಕರಾದ ತರುಣ್ ತೇಜ್ಪಾಲ್ ಮತ್ತು ಅನಿರುದ್ಧ್ ಬೆಹ್ಲ್ ಮತ್ತು ಮ್ಯಾಥ್ಯೂ ಸ್ಯಾಮ್ಯುಯೆಲ್ ಪಾವತಿಸಬೇಕಿದೆ.

ನ್ಯೂಸ್ ಪೋರ್ಟಲ್ 2001ರ ಮಾರ್ಚ್ 13ರಂದು ಹೊಸ ರಕ್ಷಣಾ ಸಾಧನಗಳ ಆಮದುಗೆ ಸಂಬಂಧಿಸಿದ ರಕ್ಷಣಾ ವ್ಯವಹಾರಗಳಲ್ಲಿ ಭ್ರಷ್ಟಾಚಾರವನ್ನು ಆರೋಪಿಸುವ ಕುಟುಕು ಕಾರ್ಯಾಚರಣೆ ಕಾರ್ಯಕ್ರಮವನ್ನು ಪ್ರಕಟಿಸಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ