ಉಡುಗೊರೆಯ ಬದಲು ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ರೈತರಿಗೆ ನೆರವು ಕೇಳಿದ ವಧುವರರು! - Mahanayaka
7:24 AM Thursday 12 - December 2024

ಉಡುಗೊರೆಯ ಬದಲು ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ರೈತರಿಗೆ ನೆರವು ಕೇಳಿದ ವಧುವರರು!

09/12/2020

ಚಂಡೀಗಡ: ಕರಾಳ ಕೃಷಿ ಕಾನೂನಿನ ವಿರುದ್ಧ ರಾಷ್ಟ್ರ ವ್ಯಾಪಿ ಪ್ರತಿಭಟನೆ ಬಲಗೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಕ್ರೀಡಾಪಟುಗಳು, ಸಿನಿಮಾ ತಾರೆಯರು ಮೊದಲಾದ ಕ್ಷೇತ್ರದವರು ರೈತರಿಗೆ ಬೆಂಬಲ ಸೂಚಿಸಿದ್ದಾರೆ. ಇದರ ನಡುವೆಯೇ ಇಲ್ಲೊಂದು ಕುಟುಂಬ  ತಮ್ಮ ಮನೆಯ ಮದುವೆ ಸಮಾರಂಭದಲ್ಲಿ ಉಡುಗೊರೆಯ ಬದಲು ರೈತರ ಹೋರಾಟಕ್ಕೆ ನೆರವು ನೀಡಲು ಹಣ ಸಂಗ್ರಹಿಸಿದೆ.

ವಧುವರರಿಗೆ ಉಡುಗೊರೆ ಕೊಡುವ ಬದಲು ದೆಹಲಿಯ ಚಳಿಯಲ್ಲಿ  ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಆಹಾರ, ಬೆಚ್ಚನೆಯ ಉಡುಗೆ, ಇನ್ನಿತರ ಸಾಮಗ್ರಿಗಳನ್ನು ನೀಡಲು ಧನಸಹಾಯ  ಮಾಡುವಂತೆ ಮನವಿ ಮಾಡಲಾಯಿತು. ಅದಕ್ಕಾಗಿ ಡೊನೇಶನ್ ಪೆಟ್ಟಿಗೆ ಇರಿಸಿ, ಎಲ್ಲರೂ ರೈತರ ಪ್ರತಿಭಟನೆಗೆ ಆರ್ಥಿಕ ನೆರವು ನೀಡಿದರು.

 ಚಂಡೀಗಡದಿಂದ 250 ಕಿ.ಮೀ. ದೂರದಲ್ಲಿರುವ ಪಂಜಾಬ್ ನ ಮುಕ್ತಸರ್ ನಲ್ಲಿ ಈ ಕುಟುಂಬವೊಂದು ರೈತ ಪ್ರೇಮಿ ಕೆಲಸಕ್ಕೆ ಕೈ ಹಾಕಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾಯ್ದೆಗಳು ತಮ್ಮ ಆದಾಯ ಕುಗ್ಗಿಸುವ ಜೊತೆಗೆ ಕಾರ್ಪೊರೇಟ್ ಶೋಷಣೆಗೆ ಒಳಪಡಿಸಲಿವೆ ಎಂಬ ಆತಂಕದಲ್ಲಿದೆ. ಇದೇ ಸಂದರ್ಭದಲ್ಲಿ ದೇಶದ ಜನತೆಯು ಅನ್ನದಾತನ ಜೊತೆಗೆ ನಿಲ್ಲಬೇಕಿದೆ. ಆಡಳಿತ ಪಕ್ಷ ಬಿಜೆಪಿಯ ಶಾಸಕರು, ಸಂಸದರು ರೈತರನ್ನು ಭಯೋತ್ಪಾದಕರಂತೆ ಬಿಂಬಿಸಲು ಹೊರಟಿದ್ದಾರೆ. ಈ ನಡುವೆ ದೇಶದ ಜನರು ಅನ್ನದಾತನಿಗೆ ಪ್ರೀತಿ ಹಂಚಲು ಮುಂದಾಗಿದ್ದಾರೆ.

ಇತ್ತೀಚಿನ ಸುದ್ದಿ