ರಾಷ್ಟ್ರ ರಾಜಧಾನಿಯಲ್ಲಿ ಮಳೆ ಅಬ್ಬರ: ಮಂಗಳವಾರವೂ ದೆಹಲಿಯಲ್ಲಿ ಶಾಲೆಗಳಿಗೆ ರಜೆ - Mahanayaka
1:00 AM Friday 20 - September 2024

ರಾಷ್ಟ್ರ ರಾಜಧಾನಿಯಲ್ಲಿ ಮಳೆ ಅಬ್ಬರ: ಮಂಗಳವಾರವೂ ದೆಹಲಿಯಲ್ಲಿ ಶಾಲೆಗಳಿಗೆ ರಜೆ

10/07/2023

ಭಾರಿ ಮಳೆಯಿಂದಾಗಿ ದೆಹಲಿ ಎಂಸಿಡಿ ಶಾಲೆಗಳಿಗೆ ಜುಲೈ 11 ರಂದು ರಜೆ ಘೋಷಿಸಲಾಗಿದೆ. ದಿಲ್ಲಿ ರಾಜ್ಯವು ದಾಖಲೆಯ ಮಳೆಗೆ ಸಾಕ್ಷಿಯಾಗಿದೆ. ಹೆಚ್ಚುವರಿ ಶಿಕ್ಷಣ ನಿರ್ದೇಶಕಿ ಸುಜಾತಾ ಮಲಿಕ್ ಅವರು ಇಂದು ರಜೆ ಕುರಿತು ಅಧಿಕೃತ ಆದೇಶವನ್ನು ಬಿಡುಗಡೆ ಮಾಡಿದರು.

ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ, ನಾಳೆಯೂ ಶಾಲೆಗಳನ್ನು ಮುಚ್ಚಲಾಗುವುದು. ದೆಹಲಿಯಲ್ಲಿ ಭಾರಿ ಮಳೆಯ ದೃಷ್ಟಿಯಿಂದ ಜುಲೈ 11 ರಂದು ಎಲ್ಲಾ ಎಂಸಿಡಿ ಶಾಲೆಗಳು, ಎಂಸಿಡಿ ಅನುದಾನಿತ ಮತ್ತು ಮಾನ್ಯತೆ ಪಡೆದ ಶಾಲೆಗಳು ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ ಅಂದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಕಟಣೆಯ ಪ್ರಕಾರ ಭಾರಿ ಮಳೆಯಿಂದಾಗಿ ದೆಹಲಿಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ದೆಹಲಿ ಎನ್ಸಿಆರ್ – ಗುರ್ಗಾಂವ್, ಫರಿದಾಬಾದ್, ಗಾಜಿಯಾಬಾದ್, ನೋಯ್ಡಾದ ಎಲ್ಲಾ ಶಾಲೆಗಳಿಗೆ ಜುಲೈ 10ರಂದು ಕೂಡಾ ಭಾರಿ ಮಳೆಯಿಂದಾಗಿ ರಜೆ ಘೋಷಿಸಲಾಗಿತ್ತು. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ದೆಹಲಿಯಲ್ಲಿ 24 ಗಂಟೆಗಳಲ್ಲಿ 153 ಮಿ.ಮೀ ಮಳೆಯಾಗಿದೆ.


Provided by

1982 ರ ನಂತರ ಜುಲೈನಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ನ ಹಲವಾರು ಭಾಗಗಳಲ್ಲಿ ಇಂದು ಭಾರಿ ಮಳೆಯಾಗಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ