ಮೆಟ್ರೋದಲ್ಲಿ ಮಹಿಳೆಯರ ಸೀಟ್ ನ ಮೇಲೆ ಕಾಂಡೋಮ್ ನ ಜಾಹೀರಾತು: ನೆಟ್ಟಿಗರಿಂದ ಆಕ್ರೋಶ
ಭಾರತದಲ್ಲಿ ಲೈಂಗಿಕ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗೌಪ್ಯತೆಗಳನ್ನು ಕಾಪಾಡುತ್ತಾರೆ. ಇದು ಲೈಂಗಿಕ ವಿಚಾರಗಳ ಜಾಹೀರಾತುದಾರರಿಗೆ ತಲೆ ನೋವಾಗಿ ಪರಿಣಮಿಸಿದೆ.
ಹೌದು..! ದೆಹಲಿ ಮೆಟ್ರೋದಲ್ಲಿ ಕಾಂಡೋಮ್ ತಯಾರಿಕಾ ಕಂಪನಿಯ ಜಾಹೀರಾತು ಪ್ರಕಟಿಸಲಾಗಿದ್ದು, ಇದರ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ಹೊರ ಹಾಕಿರುವ ಘಟನೆ ನಡೆದಿದೆ.
ಮಹಿಳೆಯರ ಸೀಟಿನ ಮೇಲೆಯೇ ಕಾಂಡೋಮ್ ನ ಜಾಹೀರಾತು ಹಾಕಲಾಗಿದ್ದು, ಇದರ ವಿರುದ್ಧ ಟ್ವಿಟ್ಟರ್ ನಲ್ಲಿ ವ್ಯಕ್ತಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದು, ದೆಹಲಿ ಮೆಟ್ರೋ… ಮಹಿಳೆಯರ ಸೀಟಿನ ಮೇಲೆ ಕಾಂಡೋಮ್ ಜಾಹೀರಾತು ? ಇದು ನಿಮ್ಮ ತಪ್ಪಲ್ಲ. ಆದರೆ ಇದು ಹಗಲಿನಲ್ಲಿ ಟಿವಿಯಲ್ಲಿ ಕಾಂಡೋಮ್ ಜಾಹೀರಾತುಗಳನ್ನು ತೋರಿಸದಿರುವ ನಿಯಮಗಳಿರುವ ದೇಶ ಎಂದು ನೀವು ತಿಳಿದಿರಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೂ ವ್ಯಕ್ತಿಯ ಟ್ವೀಟ್ ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದು, ಹಲವರು ಇದರಲ್ಲಿ ಏನಿದೆ ತಪ್ಪು ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಮೆಟ್ರೋವನ್ನು ತರಾಟೆಗೆತ್ತಿಕೊಂಡಿದ್ದಾರೆ.
ವ್ಯಕ್ತಿಯ ಟ್ವೀಟ್ ನ್ನು ಹಲವು ಬಳಕೆದಾರರು ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ ಅನ್ನು ಟ್ಯಾಗ್ ಮಾಡಿದ ನಂತರ, ಈ ಜಾಹೀರಾತು ಹಳೆಯದು ಮತ್ತು ಈಗಾಗಲೇ ತೆಗೆದುಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka