ರೈಲು ಹಳಿಯ ಮೇಲೆ ನಿಂತು ಸೆಲ್ಫಿ: ನಾಲ್ವರು ಯುವಕರ ದುರ್ಮರಣ

ದೆಹಲಿ: ರೈಲು ಹಳಿಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ದೆಹಲಿಯ ಗುರುಗ್ರಾಮದಲ್ಲಿ ನಡೆದಿದೆ.
ದೂರದಲ್ಲಿ ರೈಲು ಬರುತ್ತಿರುವ ವೇಳೆ ಸೆಲ್ಫಿ ತೆಗೆದರೆ ಚೆನ್ನಾಗಿ ಬರುತ್ತದೆ ಎಂದು ನಾಲ್ವರು ಯುವಕರಾದ ದೇವಿಲಾಲ್ ಕಾಲೋನಿಯ ಸಮೀರ್ (19), ಮೊಹಮ್ಮದ್ ಅನಸ್ (20), ಯೂಸುಫ್ ಅಲಿಯಾಸ್ ಭೋಲಾ (21) ಮತ್ತು ಯುವರಾಜ್ ಗೋಗಿಯಾ (18) ರೈಲು ಹಳಿಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.
ರೈಲು ಅತೀ ವೇಗದಿಂದ ಬರುತ್ತಿದ್ದರೂ ಯುವಕರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ರೈಲು ಡಿಕ್ಕಿ ಹೊಡೆದು ನಾಲ್ವರೂ ಮೃತಪಟ್ಟಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ವಿಧಿವಶ
ಕೆಂಪುಕೋಟೆ ಗಲಭೆಯ ಪ್ರಮುಖ ಆರೋಪಿ ಸಿಧು ಅಪಘಾತದಲ್ಲಿ ಸಾವು!
ಅಮ್ಮನ ಸಾವಿಗೆ ಕಾರಣವಾದ ಮಗಳ ವಾಟ್ಸಾಪ್ ಸ್ಟೇಟಸ್
ಬಹುಕೋಟಿ ಮೇವು ಹಗರಣ: ಲಾಲೂ ಪ್ರಸಾದ್ ಯಾದವ್ ದೋಷಿ; ಸಿಬಿಐ ಕೋರ್ಟ್
ಶಬರಿಮಲೆಗೆ ತೆರಳಿದ ಕರ್ನಾಟಕದ ಟಿಟಿ ವಾಹನ ಅಪಘಾತ: ಮೂವರ ಸಾವು, 11 ಮಂದಿಗೆ ಗಾಯ