2022ರ ದೆಹಲಿ ಗಲಭೆ ವಿಚಾರ: ಪೊಲೀಸರಿಂದ ಸುಳ್ಳು ಆರೋಪ ಪಟ್ಟಿ ಸಲ್ಲಿಕೆ ಆರೋಪ - Mahanayaka
12:16 AM Sunday 22 - December 2024

2022ರ ದೆಹಲಿ ಗಲಭೆ ವಿಚಾರ: ಪೊಲೀಸರಿಂದ ಸುಳ್ಳು ಆರೋಪ ಪಟ್ಟಿ ಸಲ್ಲಿಕೆ ಆರೋಪ

07/12/2024

2022ರಲ್ಲಿ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿ ದೆಹಲಿ ಪೊಲೀಸರು ತನ್ನ ಮೇಲೆ ಯುಎಪಿಎ ಪ್ರಕರಣ ದಾಖಲಿಸಿರುವುದರ ಔಚಿತ್ಯವನ್ನು ಉಮರ್ ಖಾಲಿದ್ , ದೆಹಲಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ. ವಿಚಾರಣಾ ನ್ಯಾಯಾಲಯವು ತನಗೆ ಜಾಮೀನು ನಿರಾಕರಿಸಿರುವುದನ್ನು ಪ್ರಶ್ನಿಸಿ ಅವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು ಇದರ ವಿಚಾರಣೆಯ ವೇಳೆ ದೆಹಲಿ ಪೊಲೀಸರ ಕ್ರಮವನ್ನು ಆಧಾರ ಸಮೇತ ಪ್ರಶ್ನಿಸಿದ್ದಾರೆ.

ಪೊಲೀಸರ ಪ್ರಕಾರ ಸಂಚು ನಡೆಸಿದ ಸಭೆಯಲ್ಲಿ ಅನೇಕರಿದ್ದರು. ಆದರೆ ಅವರು ಉಮರ್ ಖಾಲಿದ್ ಮತ್ತು ಶರ್ಜಿಲ್ ಇಮಾಮ್ ರನ್ನು ಮಾತ್ರ ಆರೋಪಿಗಳನ್ನಾಗಿ ಹೆಸರಿಸಿದ್ದಾರೆ. ಹಾಗಿದ್ದರೆ ಉಳಿದ ಆರೋಪಿಗಳ ಹೆಸರನ್ನು ಯಾಕೆ ಉಲ್ಲೇಖಿಸಿಲ್ಲ, ಅವರು ಹೇಗೆ ತಪ್ಪಿಸಿಕೊಂಡರು ಎಂದು ಖಾಲಿದ್ ಅವರ ವಕೀಲ ತ್ರಿದೀಪ್ ಪಾಯ್ಸ್ ನ್ಯಾಯಾಲಯದಲ್ಲಿ ವಾದಿಸಿದ್ದಾರೆ.

ಅಂದ್ರೆ ಪೊಲೀಸರು ಸುಳ್ಳು ಆರೋಪ ಪಟ್ಟಿಯನ್ನು ದಾಖಲಿಸಿದ್ದಾರೆ. ಗಲಭೆಯ ಸಂದರ್ಭದಲ್ಲಿ ಉಮರ್ ಖಾಲಿದ್ ಉತ್ತರ ಪೂರ್ವ ದೆಹಲಿಯಲ್ಲಿ ಇದ್ದಿರಲೇ ಇಲ್ಲ ಮತ್ತು ಅವರು ಅಮರಾವತಿಯಲ್ಲಿ ಮಾಡಿದ ಭಾಷಣವು ಗಾಂಧಿ ವಿಚಾರಧಾರೆ ಮತ್ತು ಅಹಿಂಸೆಯ ಮೇಲೆ ಕೇಂದ್ರೀಕೃತವಾಗಿತ್ತು ಎಂದವರು ಹೇಳಿದ್ದಾರೆ.

ಉಮರ್ ಖಾಲಿದ್ ಗೆ ಸಂಬಂಧಿಸಿ ಏನನ್ನೂ ವಶಪಡಿಸಿಕೊಳ್ಳಲಾಗಿಲ್ಲ, ಗಲಭೆಯ ಸಂದರ್ಭದಲ್ಲಿಅವರ ದೈಹಿಕ ಉಪಸ್ಥಿತಿಗೆ ಸಾಕ್ಷಿಗಳಿಲ್ಲ, ಅವರ ಮೇಲೆ ಭಯೋತ್ಪಾದನೆಯ ಆರೋಪ ಇಲ್ಲ. ಹೀಗಿದ್ದೂ ಅವರ ಮೇಲೆ ಯುಎಪಿಎ ಕೇಸು ದಾಖಲಿಸಿರುವುದೇಕೆ ಎಂದು ಅವರು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ.
ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 12ಕ್ಕೆ ನಿಗದಿಪಡಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ