“ಸಾರಿ ಲವ್ ನಿನ್ನ ಊಟ ನಾನು ತಿಂದೆ” ಎಂದು ಸಂದೇಶ ಕಳುಹಿಸಿದ ಡೆಲಿವರಿ ಬಾಯ್ | ಮುಂದೇನಾಯ್ತು? - Mahanayaka
5:08 PM Wednesday 11 - December 2024

“ಸಾರಿ ಲವ್ ನಿನ್ನ ಊಟ ನಾನು ತಿಂದೆ” ಎಂದು ಸಂದೇಶ ಕಳುಹಿಸಿದ ಡೆಲಿವರಿ ಬಾಯ್ | ಮುಂದೇನಾಯ್ತು?

10/02/2021

ಲಂಡನ್: ಊಟ ಆರ್ಡರ್ ಮಾಡಿದ ಯುವತಿಗೆ ಊಟದ ಬದಲು ಒಂದು ಸಂದೇಶ ಮಾತ್ರ ಬಂದಿದೆ. ಅದು ಡೆಲಿವರಿ ಬಾಯ್ ಕಳುಹಿಸಿದ ಸಂದೇಶ.  “ಸಾರಿ ಲವ್, ಊಟ ನಾನೆ ತಿಂದು ಬಿಟ್ಟೆ” ಎಂದು ಡೆಲಿವರಿ ಬಾಯ್ ಸಂದೇಶ ಕಳುಹಿಸಿದ್ದು, ಇದರಿಂದ ಹಸಿವಿನಿಂದ ಕಾಯುತ್ತಿದ್ದ ಯುವತಿ ಕಂಗಾಲಾಗಿದ್ದಾಳೆ.

21 ವರ್ಷದ ಇಲಿಯಾಸ್ ಎಂಬ ಯುವತಿ 2 ಬರ್ಗರ್, ಚಿಕನ್ ಹಾಗೂ ಇನ್ನಿತರ ಖಾದ್ಯಗಳನ್ನು ಆರ್ಡರ್ ಮಾಡಿ, 1,456 ರೂಪಾಯಿ ಹಣವನ್ನು ಪಾವತಿಸಿದ್ದಾಳೆ. ಊಟ ಈಗ ಬರುತ್ತದೆ ಎಂದು ಕಾಯುತ್ತಿರುವಾಗಲೇ ಡೆಲಿವರಿ ಬಾಯ್, “ಸಾರಿ ಲವ್, ಊಟವನ್ನು ನಾನೇ ತಿಂದೆ” ಎಂದು ಮೆಸೇಜ್ ಕಳುಹಿಸಿದ್ದಾನೆ.

ಈ ಮೆಸೇಜ್ ನೋಡಿದ ಯುವತಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಟ್ವಿಟ್ಟರ್ ನಲ್ಲಿ, ಡೆಲಿವರಿ ಬಾಯ್ ನ ಸಂದೇಶವನ್ನು ಸ್ಕ್ರೀನ್ ಶಾಟ್ ತೆಗೆದು ಹಾಕಿಕೊಂಡಿದ್ದಾರೆ. ಈ ಡೆಲಿವರಿ ಬಾಯ್ ಆರೋಗ್ಯವಾಗಿದ್ದಾನೆ ತಾನೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಾಗಿ ಕೆಲವೇ ಕ್ಷಣಗಳಲ್ಲಿ ಆನ್ ಲೈನ್ ಫುಡ್ ಆ್ಯಪ್ ನಿಂದ ಇನ್ನೊಂದು ಮೆಸೆಜ್ ಬಂದಿದ್ದು, ನಿಮ್ಮ ಊಟ ಸುರಕ್ಷಿತವಾಗಿ ತಲುಪಿಸಲಾಗುತ್ತಿದೆ. ಇನ್ನು ಬರುವ ಡೆಲಿವರಿ ಬಾಯ್ ಗೆ ಬೇಕಿದ್ದರೆ, ಟಿಪ್ಸ್ ಕೊಡಿ ಎಂದು  ಸಂದೇಶ ಕಳಹಿಸಿದ್ದಾರೆ.

ಇತ್ತೀಚಿನ ಸುದ್ದಿ