ಡೆಲ್ಟಾ ಪ್ಲಸ್ ಗೆ ದೇಶದಲ್ಲಿ ಮೊದಲ ಬಲಿ | ದೇಶದಲ್ಲಿ 50 ಪ್ರಕರಣಗಳು
ಮಧ್ಯಪ್ರದೇಶ: ಕೊರೊನಾ 2ನೇ ಅಲೆಗೆ ದೇಶ ತತ್ತರಿಸಿರುವ ನಡುವೆಯೇ ರೂಪಾಂತರಿ ಕೊರೊನಾ ಡೆಲ್ಟಾ ಪ್ಲಸ್ ಇದೀಗ 50 ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿವೆ. ಈ ನಡುವೆ ಮಧ್ಯಪ್ರದೇಶದಲ್ಲಿ ಓರ್ವ ವ್ಯಕ್ತಿ ಡೆಲ್ಟಾ ಪ್ಲಸ್ ಗೆ ಬಲಿಯಾಗಿದ್ದಾರೆ.
ಡೆಲ್ಟಾ ಪ್ಲಸ್ ಗೆ ವ್ಯಕ್ತಿ ಬಲಿಯಾಗಿರುವ ವಿಚಾರವನ್ನು ಉಜ್ಜಯಿನಿಯ ನೋಡೆಲ್ ಅಧಿಕಾರಿ ಡಾ.ರೋನಕ್ ತಿಳಿಸಿದ್ದು, ಸೋಂಕಿತನ ಜೀನೋಮ್ ಟೆಸ್ಟ್ ರಿಪೋರ್ಟ್ ಬರುವುದಕ್ಕೂ ಮೊದಲು ರೋಗಿ ಸಾವನ್ನಪ್ಪಿರುವುದಾಗಿ ಅವರು ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ 5 ಡೆಲ್ಟಾ ಪ್ಲಸ್ ಸೋಂಕಿತರು ಪತ್ತೆಯಾಗಿದ್ದಾರೆ. ಈ ಪೈಕಿ ಓರ್ವ ಇದೀಗ ಬಲಿಯಾಗಿದ್ದಾರೆ.
ಡೆಲ್ಟಾ ಪ್ಲಸ್ ರೂಪಾಂತರಿ ದೇಶದಲ್ಲಿ ಸ್ವಲ್ಪ ತಡವಾಗಿ ಪತ್ತೆಯಾದರೂ, ಅದರ ವೇಗ ಹೆಚ್ಚಿದೆ. ಮಹಾರಾಷ್ಟ್ರದಲ್ಲಿ 21, ಮಧ್ಯಪ್ರದೇಶದಲ್ಲಿ 5, ಕೇರಳದಲ್ಲಿ 3, ತಮಿಳುನಾಡಿನಲ್ಲಿ 3 ಹಾಗೂ ಕರ್ನಾಟಕದಲ್ಲಿ 3 ಡೆಲ್ಟಾ ಪ್ಲಸ್ ಕೇಸ್ ಗಳು ಪತ್ತೆಯಾಗಿವೆ, ಇನ್ನುಳಿದಂತೆ ಪಂಜಾಬ್ ಹಾಗೂ ಆಂಧ್ರಪ್ರದೇಶದಲ್ಲಿ ತಲಾ 1 ಡೆಲ್ಟಾಪ್ಲಸ್ ಪ್ರಕರಣಗಳ ಪತ್ತೆಯಾಗಿದೆ ಎಂದು ವರದಿಯಾಗಿದೆ.