ಸಹೋದರ ಸಹೋದರಿಯ ನೆರವಿಗೆ ಜಿಲ್ಲಾಡಳಿತ ಬರುವಂತೆ ಆಗ್ರಹ
ಮಣಿಪಾಲದ ಸಾರ್ವಜನಿಕ ಸ್ಥಳದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಸಹೋದರ ಸಹೋದರಿಯರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು ಪಡಿಸಿದ್ದಾರೆ.
ಅಸಹಾಯಕರನ್ನು ವೀರೇಶ್ (18) ಸಹೋದರಿ ಪವಿತ್ರಾ (19) ಎಂದು ಗುರುತಿಸಲಾಗಿದ್ದು, ಇರ್ವರು ಅನಾಥ ಸ್ಥಿತಿಯಲ್ಲಿದ್ದಾಗ ಮಕ್ಕಳ ರಕ್ಷಣಾ ಘಟಕದಿಂದ ರಕ್ಷಿಸಲ್ಪಟ್ಟವರು ಮತ್ತು ಪುರ್ನವಸತಿ ಪಡೆದವರೆಂದು ಹೇಳಿಕೊಂಡಿದ್ದಾರೆ. ವಿರೇಶ್ ಕ್ಷಯ ರೋಗ ಬಾಧಿತನಾಗಿದ್ದು, ಜಿಲ್ಲಾಸ್ಪತ್ರೆಯ ಕ್ಷಯ ರೋಗ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅಸಹಾಯಕ ಸ್ಥಿತಿಯಲ್ಲಿರುವ ಇರ್ವರು, ಅನಾಥರಾಗಿದ್ದು, ಜಿಲ್ಲಾಡಳಿತ ಇರ್ವರಿಗೆ ರಕ್ಷಣೆ, ಪುರ್ನವಸತಿ ನೀಡಬೇಕೆಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw