ರಾಜ್ಯಪಾಲರಿಗೆ ಜೀವ ಬೆದರಿಕೆ ಬಗ್ಗೆ ನನಗಾಗಲಿ ಇಲಾಖೆಗಾಗಲಿ ಮಾಹಿತಿ ಇಲ್ಲ: ಡಾ.ಜಿ ಪರಮೇಶ್ವರ್
ತುಮಕೂರು: ರಾಜ್ಯಪಾಲರಿಗೆ ಜೀವ ಬೆದರಿಕೆ ಇದೆ ಎಂಬ ಮಾಹಿತಿ ನನಗಾಗಲಿ ಅಥವಾ ನಮ್ಮ ಇಲಾಖೆಗೆ ಇದುವರೆಗೂ ಬಂದಿಲ್ಲ ಎಂದು ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಪಾಲರ ಇತಿಮಿತಿಯಲ್ಲಿ ಅನ್ನಿಸಿರಬಹುದು. ಅಲ್ಲದೆ ಬೆದರಿಕೆ ಮಾಹಿತಿ ವಿವಿಧಡೆಯಿಂದ ಬಂದಿರಬಹುದು ಎಂದು ತಿಳಿಸಿದರು.
ನನ್ನ ಸಹಿಯನ್ನು ಫೋರ್ಜರಿ ಮಾಡಲಾಗಿದೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಸಂಬಂಧಪಟ್ಟಂತೆ ಅವರು ದೂರು ನೀಡಿದರೆ ಅದನ್ನು ಎಫ್ ಎಸ್ ಎಲ್ ಗೆ ಕಳುಹಿಸಿ ತನಿಖೆ ಮಾಡಿಸಿಕೊಳ್ಳುತ್ತೇವೆ, ಟೆಕ್ನಾಲಜಿ ಬಹಳ ಮುಂದುವರಿದಿದೆ ಎಂದರು.
ಅವರು ನಾವು ಯಾವುದೇ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಹಾಗಿದ್ದಿದ್ದರೆ ಈ ಇಂದಿನ ಬಿಜೆಪಿ ಸರ್ಕಾರದಲ್ಲಿ ಸುಮಾರು 25ಕ್ಕೂ ಹೆಚ್ಚು ಹಗರಣಗಳು ನಡೆದಿದೆ. ಪ್ರಸ್ತುತ ಎಸ್ ಐಟಿಯವರು ಮತ್ತು ಲೋಕಾಯುಕ್ತರದವರು ತನಿಖೆ ಮಾಡುತ್ತಿದ್ದಾರೆ. ಎಲ್ಲದರ ಕುರಿತು ಕ್ರಮ ತೆಗೆದುಕೊಳ್ಳಬಹುದಿತ್ತು ಆದರೆ ನಾವು ಕಾನೂನಿನ ಪ್ರಕಾರವೇ ಕ್ರಮ ತೆಗೆದುಕೊಳ್ಳುತ್ತೇವೆ ಹೊರತುಪಡಿಸಿ ರಾಜಕಾರಣ ಮಾಡುತ್ತಿಲ್ಲ ಎಂದು ಹೇಳಿದರು.
ಬಿಜೆಪಿಯವರು ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ನಾವು ಇಂದಿಗೂ ಕೂಡ ಆರೋಪ ಮಾಡುತ್ತೇವೆ ಎಂದು ತಿಳಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth