ಮತಗಟ್ಟೆ ಅಧಿಕಾರಿಗಳ ಯಡವಟ್ಟಿನಿಂದ ಮತದಾನದ ಹಕ್ಕಿನಿಂದ ವಂಚಿತನಾದ ಮತದಾರ ಸಾದಿಕ್

ಮತಗಟ್ಟೆ ಅಧಿಕಾರಿಗಳ ಯಡವಟ್ಟಿನಿಂದಾಗಿ ಯುವಕನೋರ್ವ ಮತದಾನದ ಹಕ್ಕಿನಿಂದ ವಂಚಿತನಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಕೆರ್ಮಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ಸಂಖ್ಯೆ 101ರಲ್ಲಿ ನಡೆದಿದೆ.
ಸಾದಿಕ್ ಎಂಬುವವರು ಈ ರೀತಿ ಹಕ್ಕು ಚಲಾವಣೆಯಿಂದ ವಂಚಿತರಾದವರು. ಸಾದಿಕ್ ಅವರ ಮತವನ್ನು ಸಾದಿಕ್ ಕೆ. ಎಂಬವರು ಚಲಾಯಿಸಿದ್ದು ಇದಕ್ಕೆ ಕಾರಣ. ಸಾದಿಕ್ ಎಂಬವರು ಮತದಾನಕ್ಕಾಗಿ ಮತಗಟ್ಟೆಗೆ ತೆರಳಿದ್ದರು. ಈ ವೇಳೆ ಅವರ ಮತ ಚಲಾವಣೆಯಾಗಿರುವುದಾಗಿ ಮತಗಟ್ಟೆ ಅಧಿಕಾರಿಗಳು ತಿಳಿಸಿದರು. ಇದನ್ನು ಸಾದಿಕ್ ಆಕ್ಷೇಪಿಸಿದಾಗ ಮತದಾರರ ಪಟ್ಟಿ ಪರಿಶೀಲಿಸಿದಾಗ ಮತಗಟ್ಟೆ ಅಧಿಕಾರಿಗಳ ಎಡವಟ್ಟು ಬೆಳಕಿಗೆ ಬಂದಿದೆ.
ಸಾದಿಕ್ ಗಿಂತ ಮುಂಚೆ ಮತಗಟ್ಟೆಗೆ ಆಗಮಿಸಿದ್ದ ಕೆ.ಸಾದಿಕ್ ಮತ ಚಲಾಯಿಸಿ ಹೋಗಿದ್ದಾರೆ. ಆದರೆ ಮತಗಟ್ಟೆ ಅಧಿಕಾರಿಗಳು ಕೆ.ಸಾದಿಕ್ ಬದಲು ಸಾದಿಕ್ ಅವರ ಹೆಸರಿನಲ್ಲಿ ಅವರ ವಿವರಗಳನ್ನು ನಮೂದಿಸಿ, ಸಹಿ ಪಡೆದಿದ್ದಾರೆ. ಇಬ್ಬರ ತಂದೆಯ ಹೆಸರಲ್ಲಿ ಸಾಮ್ಯತೆ ಇದ್ದಿದ್ದೆ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.
ಆ ಬಳಿಕ ಸಾದಿಕ್ ಮತಗಟ್ಟೆಗೆ ಬಂದಾಗ ಈ ಎಡವಟ್ಟು ಗಮನಕ್ಕೆ ಬಂದಿದೆ. ಇದು ಕೆಲಕಾಲ ಗೊಂದಲಕ್ಕೆ ಕಾರಣವಾಯಿತು. ಅಧಿಕಾರಿಗಳ ಬೇಜವಾಬ್ದಾರಿ ಕಾರಣ ಸಾದಿಕ್ ಮತ ಚಲಾಯಿಸಲು ಅವಕಾಶ ಸಿಗದೆ ಹಿಂದಿರುಗುವಂತಾಯಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw