ದೇಶ ರಕ್ಷಣೆಗೆ ಗನ್ ಹಿಡಿದ ಮಿಸ್ ಉಕ್ರೇನ್
ಕೀವ್: ರಷ್ಯಾ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ವಶಪಡಿಸಿಕೊಳ್ಳಲು ದಾಳಿ ಮುಂದುವರಿಸಿದ್ದು, ರಷ್ಯಾದ ದಾಳಿ 5ನೇ ದಿನವೂ ಮುಂದುವರಿದಿದೆ. ಉಕ್ರೇಮ್ ಅಧ್ಯಕ್ಷ ವ್ಲಾಡಿಮಿರ್ ಝೆಲನ್‍ಸ್ಕಿ ಅವರು ದೇಶ ರಕ್ಷಣೆಯಲ್ಲಿ ಪಾಲ್ಗೊಳ್ಳಿ ಎನ್ನುವ ಕರೆ ನೀಡಿದ ಹಿನ್ನೆಲೆಯಲ್ಲಿ ಮಾಜಿ ಮಿಸ್ ಗ್ರ್ಯಾಂಡ್ ಉಕ್ರೇನ್ ಅನಸ್ತಾಸಿಯಾ ಲೆನ್ನಾ ದೇಶ ರಕ್ಷಣೆಗೆ ಗನ್ ಹಿಡಿದು ನಿಂತಿದ್ದಾರೆ.
ಮಿಸ್ ಉಕ್ರೇನ್ ಆಗಿರುವ ಅನಾಸ್ತೀನಾ ಲೀನಾ ಅವರು 2015ರಲ್ಲಿ ಮಿಸ್ ಗ್ರ್ಯಾಂಡ್ ಇನ್‍ಟರ್‌ನ್ಯಾಷನಲ್ ಬ್ಯೂಟಿ ಸ್ಪರ್ಧೆಯಲ್ಲಿ ಗೆದ್ದಿದ್ದರು. ಇದೀಗ ದೇಶ ರಕ್ಷಣೆ ಮಾಡಲು ಉಕ್ರೇನ್ ಸೈನ್ಯವನ್ನು ಸೇರಿಕೊಂಡಿದ್ದಾರೆ. ಕೈಯಲ್ಲಿ ಗನ್ ಹಿಡಿದು, ಸಮವಸ್ತ್ರವನ್ನು ಧರಿಸಿ ನಿಂತಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅನಾಸ್ತೀನಾ ಲೀನಾ ಉಕ್ರೇನ್ ಸೇನೆ ಸೇರುತ್ತಿದ್ದಂತೆ ಉಕ್ರೇನ್ ಮೇಯರ್ ವಿಟಾಲಿ ಕ್ಲಿಟ್ಸ್ಚ್ಕೋ ಕೂಡಾ ಸೇನೆಗೆ ಸೇರ್ಪಡೆಗೊಂಡಿದ್ದಾರೆ. ಹೆಚ್ಚಿನವರು ದೇಶ ಸೇವೆ ಮಾಡಲು ಸಿದ್ಧರಿದ್ದಾರೆ. ಆದರೆ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಕೇಳುತ್ತಿದ್ದಾರೆ. ಹೆಚ್ಚಿನವರು ಮಿಲಿಟರಿ ಹಿನ್ನೆಲೆಯುಳ್ಳವರಾಗಿದ್ದಾರೆ. ಎಲ್ಲಾ ಮಹಿಳೆಯರು ಹಾಗೂ ಪುರುಷರು ದೇಶ ರಕ್ಷಣೆಗೆ ಗನ್ ಹಿಡಿದು ಸಿದ್ಧರಾಗಬೇಕು ಎಂದು ವಿಟಾಲಿ ಹೇಳಿದ್ದಾರೆ.
ಉಕ್ರೇನ್ ಉಳಿವಿಗಾಗಿ ಮಹಿಳೆಯರು ಅಖಾಡಕ್ಕಿಳಿದಿದ್ದು, ಉಕ್ರೇನ್ ಉಪಾಧ್ಯಕ್ಷ ಸ್ಟೀಫನ್ ಕುಬಿವ್ ಪತ್ನಿ ಸೇರಿದಂತೆ 36 ಸಾವಿರಕ್ಕೂ ಹೆಚ್ಚು ಮಹಿಳಾ ಯೋಧರು ಇದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಉಕ್ರೇನ್ ಗಡಿಗಳಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಹಲ್ಲೆ, ಕಿರುಕುಳ
70 ದಂಪತಿಗಳಿಗೆ ವಂಚಿಸಿದ ನಕಲಿ ವೈದ್ಯೆ: ಮಕ್ಕಳಾಗಲು ಔಷಧಿ ಪಡೆದ ಮಹಿಳೆ ಸ್ಥಿತಿ ಗಂಭೀರ
ಇಂದು ಸಂಜೆ ದೆಹಲಿ ತಲುಪಲಿರುವ ಭಾರತೀಯರನ್ನು ಹೊತ್ತ 6ನೇ ವಿಮಾನ
ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ: ವಿರೋಧಿಸಿದಕ್ಕೆ ಪತ್ನಿಯ ತಲೆ ಕಡಿದ ಪತಿ