ದೇಶ ವಿಭಜನೆಯಾಗಲು ಅಂದಿನ ಕಾಂಗ್ರೆಸ್ ನಾಯಕರೇ ಕಾರಣ | ಅಸಾದುದ್ದಿನ್ ಓವೈಸಿ ಗುಡುಗು
ಲಕ್ನೋ: ದೇಶ ವಿಭಜನೆಯಾಗಿರುವುದು ಮುಸ್ಲಿಮರಿಂದ ಅಲ್ಲ, ಮೊಹಮ್ಮದ್ ಜಿನ್ನಾ ಅವರಿಂದ ದೇಶ ವಿಭಜನೆಯಾಗಿದೆ. ದೇಶ ವಿಭಜನೆಗೆ ಅಂದಿನ ಕಾಂಗ್ರೆಸ್ ನಾಯಕರೇ ಕಾರಣ ಎಂದು ಎಂಐಎಂಐಎಂ ನಾಯಕ ಅಸಾದುದ್ದಿನ್ ಓವೈಸಿ ಹೇಳಿದ್ದಾರೆ.
ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಸುಹೇಲ್ ದೇವ್ ಹೇಳಿಕೆ ವಿರುದ್ಧ ಮೊರದಬಾದ್ ನಲ್ಲಿ ಗುಡುಗಿದ ಅವರು, ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡುತ್ತಾ ಟೀಕೆ ವ್ಯಕ್ತಪಡಿಸಿ, ಇತಿಹಾಸವನ್ನು ಓದದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಹಾಗೂ ಭಾರತೀಯ ಜನತಾ ಪಕ್ಷ ಮತ್ತು ಸಮಾಜವಾದಿ ಪಕ್ಷದವರಿಗೆ ನಾನು ಸವಾಲು ಹಾಕುತ್ತೇನೆ. ಮುಸ್ಲಿಮರಿಂದ ದೇಶ ವಿಭಜನೆಯಾಗಿಲ್ಲ, ಜಿನ್ನಾ ಅವರಿಂದ ದೇಶ ವಿಭಜನೆಯಾಗಿದೆ, ಆ ಸಮಯದಲ್ಲಿ ಗೆದ್ದ ಕಾಂಗ್ರೆಸ್ ನಾಯಕರೇ ದೇಶ ವಿಭಜನೆಗೆ ಕಾರಣವಾಗಿದ್ದಾರೆ ಎಂದು ಸುಹೇಲ್ ದೇವ್ ಹೇಳಿಕೆಗೆ ಓವೈಸಿ ತಿರುಗೇಟು ನೀಡಿದರು.
ವಾರಣಾಸಿಯಲ್ಲಿ ಬುಧವಾರ ಮಾತನಾಡಿದ್ದ ಸುಹೇಲ್ ದೇವ್, ಜಿನ್ನಾ ಅವರನ್ನು ಭಾರತದ ಮೊದಲ ಪ್ರಧಾನಿ ಮಾಡಿದ್ದರೆ, ದೇಶ ವಿಭಜನೆಯಾಗುತ್ತಿರಲಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯಿಂದ ಮುಸ್ಲಿಮರನ್ನು ಸೆಳೆಯುವ ಅವರ ಪ್ರಯುತ್ನದ ವಿರುದ್ಧ ಓವೈಸಿ ಕಿಡಿಕಾರಿದ್ದು, ದೇಶ ವಿಭಜನೆಯಾಗಲು ಜಿನ್ನಾ ಹಾಗೂ ಅಂದಿನ ಕಾಂಗ್ರೆಸ್ ನಾಯಕರೇ ಕಾರಣ ಎಂದು ಓವೈಸಿ ಗುಡುಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಇನ್ನಷ್ಟು ಸುದ್ದಿಗಳು
KSRTC ಬಸ್ ನಲ್ಲಿ ಜೋರಾಗಿ ಹಾಡು ಹಾಕಿದರೆ ಶಿಸ್ತು ಕ್ರಮ: ಶಿಕ್ಷೆ ಏನು ಗೊತ್ತಾ?
ಯುವಕನನ್ನು ಹೆಗಲ ಮೇಲೆ ಹೊತ್ತು ರಕ್ಷಿಸಿದ ಮಹಿಳಾ ಇನ್ಸ್ ಪೆಕ್ಟರ್ ರಾಜೇಶ್ವರಿಗೆ ಸಿಎಂ ಸ್ಟಾಲಿನ್ ಅಭಿನಂದನೆ
ತಾಯಿ ಮೃತಪಟ್ಟರೂ ಗರ್ಭದಲ್ಲಿದ್ದ ಮಗುವನ್ನು ರಕ್ಷಿಸಿದ ವೈದ್ಯರು! | ಅಪರೂಪದ ಘಟನೆ
ತಲೆಗೆ ಗುಂಡು ಹಾರಿಸಿಕೊಂಡು ಕಾಂಗ್ರೆಸ್ ಶಾಸಕನ ಪುತ್ರ ಆತ್ಮಹತ್ಯೆ!
ಬಿಟ್ ಕಾಯಿನ್ ಹಗರಣ ಆರೋಪ ನಿರ್ಲಕ್ಷಿಸಲು ಸಿಎಂ ಬೊಮ್ಮಾಯಿಗೆ ಪ್ರಧಾನಿ ಮೋದಿ ಸಲಹೆ!
ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ: ಶಿಕ್ಷಣದಲ್ಲಿ ರಾಜಕೀಯ ಏಕೆ ಬೆರೆಸುತ್ತಿದ್ದೀರಿ | ಹೈಕೋರ್ಟ್ ಪ್ರಶ್ನೆ