ದೇಶದಲ್ಲಿ ಬುರ್ಖಾ ನಿಷೇಧಿಸಬೇಕು:ವಿವಾದಾತ್ಮಕ ಸ್ವಾಮೀಜಿ ರಿಷಿ ಕುಮಾರ್
ಮೈಸೂರು: ದೇಶದಲ್ಲಿ ಬುರ್ಖಾವನ್ನು ನಿಷೇಧಿಸಬೇಕು. ಕೇವಲ ಶಾಲೆಗಳಲ್ಲಿ ಮಾತ್ರ ಬುರ್ಖಾ ನಿಷೇಧ ಮಾಡುವುದಲ್ಲ. ದೇಶ ಹಾಗೂ ರಾಜ್ಯದಲ್ಲೂ ತ್ರಿವಳಿ ತಲಾಕ್ ನಿಷೇಧ ಮಾಡಿದಂತೆ ಬುರ್ಖಾ ನಿಷೇಧ ಮಾಡಬೇಕು ಎಂದು ರಿಷಿ ಕುಮಾರ್ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಬುರ್ಖಾ ಧರಿಸಿ ಬಂದರೆ ನಿಮ್ಮ ಗುರುತು ಪತ್ತೆಯಾಗುವುದಿಲ್ಲ. ವಿದ್ಯಾರ್ಥಿನಿಯೇ ಬರುತ್ತಾರೋ ಅವರ ಅಕ್ಕ, ತಂಗಿ, ಅಮ್ಮ ಬರುತ್ತಾರೋ ಹೇಗೆ ಗೊತ್ತಾಗುತ್ತದೆ.? ಪರೀಕ್ಷೆ ಯಾರು ಬರೆಯುತ್ತಾರೆ ಅನ್ನೋದು ಹೇಗೆ ಗೊತ್ತಾಗುತ್ತದೆ. ಶಾಲೆಯ ಶಿಕ್ಷಕರು ತಂದೆ ತಾಯಿಯಂತೆ. ಸಹಪಾಠಿಗಳು ಸಹೋದರರಂತೆ ಅವರನ್ನು ಅನುಮಾನಿಸದರೆ ಹೇಗೆ ಎಂದು ಪ್ರಶ್ನಿಸಿದರು.
ಇನ್ನು ಶ್ರೀರಂಗಪಟ್ಟಣದ ಮಸೀದಿ ತೆರವು ಮಾಡಿ, ಹನುಮ ದೇವಸ್ಥಾನ ಕಟ್ಟಬೇಕು ಹೇಳಿಕೆಗೆ ಈಗಲೂ ನಾನು ಬದ್ಧ. ಅಲ್ಲಿ ನನ್ನ ಹನುಮನ ದೇವಸ್ಥಾನ ಕಟ್ಟಲೇ ಬೇಕು. ಕೇವಲ ಶ್ರೀರಂಗಪಟ್ಟಣ ಮಾತ್ರವಲ್ಲ. ರಾಜ್ಯದ ಪ್ರತಿ ಹಳ್ಳಿಗೂ ಹೋಗುತ್ತೇನೆ. ನಾನು ಒಬ್ಬನೇ ಹೋಗುತ್ತೇನೆ. ಗುಂಪಿನ ಜೊತೆ ಹೋಗುವುದಿಲ್ಲ ಲಂಕೆಯನ್ನು ಸುಟ್ಟಿದ್ದು ಒಬ್ಬನೇ ಹನುಮ ಎಂದು ಹೇಳಿದರು.
ಆಜಾನ್ ಕೂಗುವ ಲೌಡ್ ಸ್ಪೀಕರ್ ಗಳನ್ನು ತೆಗೆದು ಹಾಕಲು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಈ ಸಂಬಂಧ ಈಗಾಗಲೇ ಹೋರಾಟ ಆರಂಭಿಸಿದ್ದೇನೆ. ಕೈ ಕಡಿಯುತ್ತೇವೆ ಕಾಲು ಕಡಿಯುತ್ತೇವೆ ಎಂಬ ನಿಮ್ಮ ಬೆದರಿಕೆ ಹೆದರುವುದಿಲ್ಲ. ಈ ರೀತಿ ಹೇಳುವುದು ಪ್ರಚೋದನೆ. ರಾಜ್ಯ ಸರ್ಕಾರ ದೇವಸ್ಥಾನ ಒಡೆದು ಮಸೀದಿ ಕಟ್ಟಿರುವುದನ್ನು ಪತ್ತೆ ಹಚ್ಚಬೇಕು. ಈ ರೀತಿಯ ದೇಗುಲಗಳನ್ನು ನಾವು ಪತ್ತೆ ಹಚ್ಚುತ್ತೇವೆ. ಅದಕ್ಕಾಗಿ ಸಮಿತಿ ರಚಿಸಿ ನಮಗೆ ರಕ್ಷಣೆ ಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಶೇಂದಿ ತೆಗೆಯುತ್ತಿದ್ದಾಗ ತಾಳೆ ಮರದಿಂದ ಬಿದ್ದು ವ್ಯಕ್ತಿ ಸಾವು
ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಗ್ನಿ ಅವಘಡ
ಡಾ.ಬಿ.ಆರ್.ಅಂಬೇಡ್ಕರ್ ಗೆ ಅವಮಾನ: ಸೂಕ್ತ ಕ್ರಮಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ
ಯುವತಿಯ ಅಪಹರಣ: ಲೈಂಗಿಕ ದೌರ್ಜನ್ಯವೆಸಗಿ ಬೀದಿಯಲ್ಲಿ ಮೆರವಣಿಗೆ
3 ವರ್ಷದ ಹೆಣ್ಣು ಮಗುವಿನ ಅತ್ಯಾಚಾರ ಯತ್ನ: ಆರೋಪಿಯ ಸೆರೆ; ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು